VIDEO-ಸತೀಶ್ ಜಾರಕಿಹೊಳಿ ವಿರುದ್ಧ ಮಾತನಾಡಿದ್ರೆ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ – ಯತ್ನಾಳ್ ಗೆ ಬೆಂಬಲಿಗರ ಎಚ್ಚರಿಕೆ
ಗೋಕಾಕ್ : ಮಿಸ್ಟರ್ ಯತ್ನಾಳ್ ಗೋಕಾಕ್ ನಗರಕ್ಕೆ ಬರುತ್ತಿರುವ ನೀನು ಬಂದೆ ಪುಟ್ಟಾ ಹೋದೆ ಪುಟ್ಟಾ ರೀತಿ ಇರಬೇಕು. ಅದು ಬಿಟ್ಟು ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಮಾತನಾಡಿದರೆ ನಿನ್ನನ್ನು ವೇದಿಕೆ ಹೊಕ್ಕು ಹೊಡೆಯುತ್ತೇವೆ ಎಂದು ಮಹಿಳೆ ಅವಾಜ್ ಹಾಕಿದ್ದಾಳೆ.
ಗೋಕಾಕ್ ಪಟ್ಟಣದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ತೇಜೋವಧೆ ನಡೆಯುತ್ತಿದೆ ಎಂದು ಜಾರಕಿಹೊಳಿ ಬೆಂಬಲಿಗರು ಆರೋಪಿಸಿದ್ದಾರೆ. ಪಂಚಮಸಾಲಿ ಸಮುದಾಯದ 2 ಎ ಮೀಸಲಾತಿ ಹೋರಾಟದ ಭಾಗವಾಗಿ ಗೋಕಾಕ್ ನಗರದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಕುರಿತು ಮಾತನಾಡುತ್ತೇನೆ ಎಂದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮಹಿಳೆ ಎಚ್ಚರಿಕೆ ನೀಡಿದ್ದು.
ಪಂಚಮಸಾಲಿ ಹೋರಾಟಕ್ಕೆ ನಮ್ಮದೂ ಬೆಂಬಲ ಇದೆ. ವೇದಿಕೆಯಲ್ಲಿ ಅದನ್ನು ಮಾತ್ರ ಮಾತನಾಡಬೇಕು. ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಅವರಿಗೆ ಮಾತನಾಡಿದಂತೆ ನಮ್ಮ ಸಾಹುಕಾರ್ ಸತೀಶ್ ಜಾರಕಿಹೊಳಿ ವಿರುದ್ಧ ಮಾತನಾಡಿದರೆ ನಿನ್ನನ್ನು ವೇದಿಕೆ ಹೊಕ್ಕು ಹೊಡೆಯುತ್ತೇವೆ ಎಂದು ಹೇಳಿರುವ ವೀಡಿಯೋ ವೈರಲ್ ಆಗುತ್ತಿದೆ.