VIDEO-ಗೋಕಾಕ್ ಪಟ್ಟಣಕ್ಕೆ ಯತ್ನಾಳ್ ಗೌಡ್ರ ಖಡಕ್ ಎಂಟ್ರಿ
ಗೋಕಾಕ್ : ಗೋಕಾಕ್ ಪಟ್ಟಣದಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಡಕ್ ಎಂಟ್ರಿ ಕೊಟ್ಟಿದ್ದಾರೆ.
ಹಿಂದೂ ಪದದ ಅರ್ಥ ಅಶ್ಲೀಲ ಹೇಳಿಕೆ ನೀಡಿದ ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದ ಯತ್ನಾಳ್, ಗೋಕಾಕ್ ಪಂಚಮಸಾಲಿ ಸಮಾವೇಶದಲ್ಲಿ ಧ್ವನಿ ಎತ್ತುವುದಾಗಿ ಹೇಳಿದ್ದರು. ಈ ಹೇಳಿಕೆ ವಿರೋಧಿಸಿ ಶಾಸಕ ಸತೀಶ್ ವಿರುದ್ಧ ಮಾತನಾಡಿದರೆ ವೇದಿಕೆ ಹೊಕ್ಕು ಹೊಡೆಯುವುದಾಗಿ ಮಹಿಳೆ ಅವಾಜ್ ಹಾಕಿದ್ದರು.
ಸಧ್ಯ ಬಸನಗೌಡ ಪಾಟೀಲ್ ಯತ್ನಾಳ್ ಸಾವಿರಾರು ಸಮಾಜದ ಯುವಕರ ಜೊತೆಗೂಡಿ ಗೋಕಾಕ್ ಪಟ್ಟಣಕ್ಕೆ ಆಗಮಿಸಿದ್ದಾರೆ. ಜೊತೆಗೆ 2 ಎ ಮೀಸಲಾತಿಗೆ ಸಮಾವೇಶದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.