Select Page

Advertisement

ಟಿ – 20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ; ಪಾಕಿಸ್ತಾನಕ್ಕೆ ಹೀನಾಯ ಸೋಲು

ಟಿ – 20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ; ಪಾಕಿಸ್ತಾನಕ್ಕೆ ಹೀನಾಯ ಸೋಲು

ಇಂಗ್ಲೆಂಡ್ ಹಾಗೂ ಪಾಕಿಸ್ತಾನದ ನಡುವೆ ನಡೆಯುತ್ತಿರುವ T – 20 ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ಗೆದ್ದು ಬೀಗಿದ್ದರೆ, ಪಾಕಿಸ್ತಾನ ಹೀನಾಯ ಸೋಲು ಅನುಭವಿಸಿದೆ.

ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ಇಂಗ್ಲೆಂಡ್ ತಂಡಕ್ಕೆ 138 ರನ್ ಟಾರ್ಗೆಟ್ ನೀಡಿತ್ತು. ಇದನ್ನು ಬೆನ್ನಟ್ಟಿದ ಇಂಗ್ಲೆಂಡ್ ಕೊನೆಗೆ 6 ಬಾಲ್ ಬಾಕಿ ಇರುವಂತೆ ಗೆದ್ದು ಬೀಗಿದೆ.

ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ – 52, ಜೋಸ್ ಬಟ್ಟರ್- 26, ಹ್ಯಾರಿ ಬ್ರೂಕ್ – 20 ರನ್ ಗಳಿಸಿದರೆ. ಬೌಲಿಂಗ್ ನಲ್ಲಿ ಪಾಕಿಸ್ತಾನದ ಹ್ಯಾರಿಸ್ ರೌಫ್ – 2 ವಿಕೆಟ್ ಪಡೆದುಕೊಂಡರು.

ಪಾಕಿಸ್ತಾನದ ಪರ ಶಾನ್ ಮಸೂದ್ – 38, ಬಾಬರ್ ಅಜಂ – 32, ಶಾದಾಬ್ ಖಾನ್ 20 ರನ್ ಗಳಿಸಿದ್ದರು. ಇಂಗ್ಲೆಂಡ್ ತಂಡದ ಸ್ಯಾಮ್ ಕರನ್ 3 ವಿಕೆಟ್ ಪಡೆದರು. ಇವರ ಮಾರಕ ದಾಳಿಗೆ ಪಾಕಿಸ್ತಾನ – 137/8 (20) ರನ್ ಗಳಿಸಿತ್ತು. ಇಂಗ್ಲೆಂಡ್ 138/5 (19) ಗಳಿಸಿ ಗೆಲುವು ಸಾಧಿಸಿದೆ.

Advertisement

Leave a reply

Your email address will not be published. Required fields are marked *