
ಯಮಕನಮರಡಿಗೆ ನಾಳೆ ಚಕ್ರವರ್ತಿ ಸೂಲಿಬೆಲೆ – ಬುಧವಾರ “ನಾನು ಹಿಂದೂ” ಕಾರ್ಯಕ್ರಮ ಆಯೋಜನೆ

ಯಮಕನಮರಡಿ : ಹಿಂದೂ ಪದದ ಕುರಿತು ವಿವಾದದ ಸುಳಿಯಲ್ಲಿ ಸಿಲುಕಿದ್ದ ಶಾಸಕ ಸತೀಶ್ ಜಾರಕಿಹೊಳಿ ಅವರ ಸ್ವ ಕ್ಷೇತ್ರದಲ್ಲಿ ಹಿಂದೂ ಸಂಘಟನೆ ಸದಸ್ಯರು ಬೃಹತ್ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ.
ನಾಳೆ ಡಿಸೆಂಬರ್ 16 ರ ಬುಧವಾರ ಯಮಕನಮರಡಿಯಲ್ಲಿ ಸಂಜೆ 5 ಘಂಟೆಗೆ ನಾನು ಹಿಂದೂ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯ ಭಾಷಣಕಾರರಾಗಿ ಯುವ ಬ್ರಿಗೇಡ್ ಮುಖ್ಯಸ್ಥ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಆಗಮಿಸುತ್ತಿದ್ದಾರೆ.
ಈ ಕುರಿತು ಮಾಹಿತಿನಿ ನೀಡಿದ ಬಿಜೆಪಿ ಮುಖಂಡ ಮಾರುತಿ ಅಷ್ಟಗಿ. ಹಿಂದೂಗಳ ಭಾವನೆಗೆ ದಕ್ಕೆ ಉಂಟುಮಾಡಿರುವ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಹಿಂದೂತ್ವದ ಶಕ್ತಿ ಸಾಮರ್ಥ್ಯ ತೋರಿಸುವ ನಿಟ್ಟಿನಲ್ಲಿ ನಾನು ಹಿಂದೂ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.