BREAKING : ಮಹಾ ಎಡವಟ್ಟು : ಕೃಷ್ಣಾ ನದಿ ತೀರದ ಜನರಲ್ಲಿ ಹೆಚ್ಚಿದ ಆತಂಕ
ಅಥಣಿ : ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ದಾಧಾನಗರಿ ಜಲಾಶಯ ಗೆಟ್ ರಿಪೇರಿ ಮಾಡುವ ಸಂದರ್ಭದಲ್ಲಿ ಅವಗಢ ಸಂಭವಿಸಿದ್ದು, ಅಪಾರ ಪ್ರಮಾಣದ ನೀರು ಪಂಚಗಂಗಾ ನದಿಯ ಮೂಲಕ ಕೃಷ್ಣಾನದಿಗೆ ಸೇರುತ್ತಿದ್ದು ನದಿತೀರ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬುಧವಾರ ಬೆಳಗಿನಜಾವ ರಾಧಾನಗರಿ ಜಲಾಶಯ ಗೇಟ್ ರಿಪೇರಿ ಮಾಡುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು, ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರ ಬರುತ್ತಿರುವ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ. ಈ ಜಲಾಶಯದ ನೀರು ಕೃಷ್ಣಾ ನದಿಗೆ ಬರುವ ಹಿನ್ನಲೆಯಲ್ಲಿ ಕರ್ನಾಟಕದ ಕೆಲವು ಭಾಗದ ನದಿ ಪಾತ್ರದ ಜನರಲ್ಲಿ ಆತಂಕ ಮೂಡಿದೆ.
ರಾಧಾನಗರಿ ಜಲಾಶಯದ ಮೂರು ಗೇಟ್ ಮುಖಾಂತರ ಎಂಟು ಟಿಎಂಸಿ ನೀರು ಹರಿದುಬರುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ, ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ ಸೇರುವುದರಿಂದ ಕೃಷ್ಣಾ ನದಿ ತೀರದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಗುರುವಾರದ ವರೆಗೆ ಬಾಗಲಕೋಟೆ ಜಿಲ್ಲೆ ಹಿಪ್ಪರಗಿ ಬ್ಯಾರೇಜ್ ಗೆ ಎರಡು ಟಿಎಂಸಿ ನೀರು ಬರಬಹುದು ಎಂದು ಅಧಿಕಾರಿಗಳು ನಿರೀಕ್ಷೆ ಮಾಡಿದ್ದಾರೆ. ಈಗಾಗಲೇ ನದಿಪಾತ್ರದ ಜನರಿಗೆ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರ ಜಲಾಶಯದಿಂದ ಅಪಾರ ಪ್ರಮಾಣದ ನೀರಿಂದ ಬೆಳಗಾವಿ ಜಿಲ್ಲೆ ಚಿಕ್ಕೋಡಿ, ಕಾಗವಾಡ, ನಿಪ್ಪಾಣಿ, ಅಥಣಿ ತಾಲೂಕಿನ ಕೃಷ್ಣಾ ನದಿ ಪಾತ್ರದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.