
ದೆಹಲಿ ಗೆದ್ದ ಬಿಜೆಪಿ, ಕೇಜ್ರಿವಾಲ್ ಹೀನಾಯ ಸೋಲು ; ಯಾರಾಗ್ತಾರೆ ಸಿಎಂ

ದೆಹಲಿ : ಕಳೆದ ಹತ್ತು ವರ್ಷಗಳಿಂದ ದೆಹಲಿ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಅರವಿಂದ ಕೇಜ್ರಿವಾಲ್ ಈಗ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸುವ ಮೂಲಕ ಗೆಲುವಿನ ಅಧ್ಯಾಯ ಮುಗಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಕಳೆದ ಹತ್ತು ವರ್ಷಗಳ ಹಿಂದೆ ದೆಹಲಿ ಗದ್ದುಗೆ ಹಿಡಿದಿದ್ದ ಅರವಿಂದ ಕೇಜ್ರಿವಾಲ್ ದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಟಕ್ಕರ್ ಕೊಡಲು ಎಎಪಿ ಪಕ್ಷದ ಮೂಲಕ ಯಶಸ್ವಿಯಾಗಿದ್ದರು.
ಯಾವ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಅಧಿಕಾರಕ್ಕೆ ಬಂದಿದ್ದ ಅರವಿಂದ ಕೇಜ್ರಿವಾಲ್ ಅವರು ಬರುಬರುತ್ತ ಭ್ರಷ್ಟಾಚಾರ ಆರೋಪ ಹೊತ್ತು ಇವರು ಸೇರಿದಂತೆ ಮಂತ್ರಿಮಂಡಲದ ಅನೇಕರು ಜೈಲು ಸೇರಿದ್ದರು.
ಅಷ್ಟೇ ಅಲ್ಲದೆ ಎಎಪಿ ಪಕ್ಷದ ಓರ್ವ ಸಂಸದೆ ತನ್ನ ವಿರುದ್ಧ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸ್ವತಃ ಕೇಜ್ರಿವಾಲ್ ಅವರ ಆಪ್ತನ ಮೇಲೆ ಗಂಭೀರ ಆರೋಪ ಮಾಡಿದ್ದಾಗಲು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದೇ ಬರುಬರುತ್ತ ಎಎಪಿಗೆ ಮುಳುವಾಗಿದೆ.
ದೆಹಲಿ ಫಲಿತಾಂಶ
ಬಿಜೆಪಿ – 48
ಎಎಪಿ – 22
ಕಾಂಗ್ರೆಸ್ – 0
ಬಿಜೆಪಿ ಸಂಭವನೀಯ ಸಿಎಂ ಆಯ್ಕೆ : ಪರ್ವೇಶ್ ವರ್ಮ