ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರ ; ಏನಾಗಿತ್ತು ಸಮಸ್ಯೆ
ಬೆಳಗಾವಿ : ಹಳೆಯ ಪಾರ್ಮ ನಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದ ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ನಾಮಪತ್ರ ಅಂಗೀಕಾರವಾಗಿದೆ.
ಹಳೆಯ ಪಾರ್ಮ ನಲ್ಲಿ ಮಾಹಿತಿ ದಾಖಲಿಸಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಚುನಾವಣಾ ಆಯೋಗ ಪರಿಶೀಲನೆ ನಡೆಸಿದ್ದು ಕೊನೆಗೂ ರತ್ನಾ ಮಾಮನಿ ನಾಮಪತ್ರ ಅಂಗೀಕಾರಗೊಂಡಿದೆ.
ಏನಾಗಿತ್ತು ಸಮಸ್ಯೆ : ರತ್ನಾ ಮಾಮನಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ಈ ಸಂದರ್ಭದಲ್ಲಿ ಹಳೆಯ ನಾಮಪತ್ರ ತುಂಬಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ವಿರೋಧಿ ಸ್ಪರ್ಧಿಗಳು ತಕರಾರು ತಗೆದಿದ್ದು ತಾಂತ್ರಿಕ ದೋಷದಿಂದ ಈ ಪ್ರಮಾದ ಉಂಟಾಗಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ್ ವೈದ್ಯ ಮಾತನಾಡಿ ಕ್ರಮಬದ್ಧವಾಗಿರದ ಪಕ್ಷೇತರ ಅಭ್ಯರ್ಥಿಯನ್ನು ಕ್ಷಣದಲ್ಲಿಯೇ ಅಧಿಕಾರಿಗಳು ತಿರಸ್ಕೃರಿಸಿದ್ದಾರೆ. ಬಿಜೆಪಿ ವಿಷಯದಲ್ಲಿ ಕಾಲಾವಕಾಶ ನೀಡಿ ತಾರತಮ್ಯವೆಸಗಿದ್ದಾರೆ. ಅಧಿಕಾರಿಗಳೇ ಒತ್ತಡದಲ್ಲಿ ಸಿಲುಕಿದ್ದಾರೆಯೇ ಎಂದು ಅವರನ್ನೇ ಪ್ರಶ್ನಿಸಿದ್ದೇನೆ. ನಾಮಪತ್ರಗಳ ಪರಿಶೀಲನೆ ಮುಕ್ತಾಯವಾದರೂ ಅಧಿಕಾರಿಗಳು ನಿರ್ಣಯ ಪ್ರಕಟಿಸಿಲ್ಲ. ಇದನ್ನು ಪಕ್ಷದ ವರಿಷ್ಠರ ಗಮನಕ್ಕಿರಿಸಲಾಗಿದೆ. ಕಾನೂನು ಬದ್ದವಾದ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ ಎಂದರು.
ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಕಚೇರಿಗೆ ಆಗಮಿಸಿ ವಕೀಲ ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಗಮಿಸಿದರು. ಈ ಕುರಿತು ಮುಂಜಾನೆಯಿಂದ ಸಂಜೆವರೆಗೂ ರಾಜಕೀಯ ಊಹಾಪೋಹಗಳು ಹರಿದಾಡಿ ಸಾರ್ವಜನಿಕ ವಲಯದಲ್ಲಿ ಗೊಂದಲಮಯ ವಾತಾವರಣವಿತ್ತು.
ಚುನಾವಣಾಧಿಕಾರಿ ರಾಜೀವ ಕೊಲೇರ ಪ್ರತಿಕ್ರಿಯಿಸಿ ಕೆಲ ತಾಂತ್ರಿಕ ದೋಷಗಳಾಗಿವೆ. ಶನಿವಾರ ಮುಂಜಾನೆ ೧೧ ರ ವರೆಗೆ ಕಾಲಾವಕಾಶ ಇದೆ. ನಾಮಪತ್ರ ಹಾಗೂ ಘಟನೆ ಕುರಿತು ತೀರ್ಮಾನಿಸಿ ಬಳಿಕ ಮಾದ್ಯಮಕ್ಕೆ ಸ್ಪಷ್ಠೀಕರಣ ನೀಡಲಾಗುವುದೆಂದರು.