
ಇಬ್ಬರ ಜಗಳ ಮೂರನೆಯವನಿಗೆ ಆಯ.

ಬೆಳಗಾವಿ : ಬೆಂಗಳೂರುನಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಆದ ಅವಮಾನ ಸಮಗ್ರ ಹಿಂದೂಗಳಿಗೆ ಆದ ಅವಮಾನ. ಛತ್ರಪತಿ ಶಿವಾಜಿ ಮಹಾರಾಜರು ಕನ್ನಡ ಸಂಸ್ಕೃತಿ, ಸಂಸ್ಕಾರ, ತರಬೇತಿಗಳನ್ನು ಅನ್ವಯಿಸಿಕೊಂಡು ಬೆಳೆದವರು. ಕನ್ನಡ ಸಂಸ್ಕಾರ ಪಡೆದ ಶಿವಾಜಿ ಮಹಾರಾಜರು ತಾಯಿ ಜೀಜಾಮಾತೆ, ಗುರು ತಾನಾಜಿ ಕೊಂಡದೇವ ಇವರ ಗರಡಿಯಲ್ಲಿ ಬೆಳೆದು ಕರ್ನಾಟಕದ ಸಂಸ್ಕೃತಿಯ ಜತೆಗೆಗೂಡಿ ಹಿಂದವಿ ಸಾಮ್ರಾಜ್ಯ ಪ್ರತಿಷ್ಠಾಪಿಸಿದ ಹಿಂದೂ ಸಾಮ್ರಾಟನೂ ಹೌದು. ಮರಾಠಾ ಸಾಮ್ರಾಜ್ಯದ ಸಂಸ್ಥಾಪಕನೂ ಹೌದು.
ಕರ್ನಾಟಕ ಸಾಮ್ರಾಜ್ಯ ಯಾವತ್ತೂ ಛತ್ರಪತಿ ಶಿವಾಜಿ ಮಹಾರಾಜರನ್ನು ಗೌರವಿಸುತ್ತದೆ. ಆದರೆ, ಸಂಸ್ಕಾರ ರಹಿತ ಕೆಲವರಿಂದಾಗಿ ಕನ್ನಡ, ಮರಾಠಿ ಎನ್ನುವ ವ್ಯತ್ಯಾಸಗಳು ಕಾಲಾನಂತರದಲ್ಲಿ ಬೆಳೆದು ನಿಂತವು. ಈ ಇಬ್ಬರಿಗೂ ಶ್ರೀಶೈಲ ಚನ್ನಮಲ್ಲಿಕಾರ್ಜುನನೇ ಗತಿ. ಆದರೂ ಸಹಿತ ಈ ಇಬ್ಬರ ನಡುವೆ ನಸುಳಿಕೊಂಡ ಮೂರನೇಯದ್ದು ಯಾರೂ..?
ಬೆಳಗಾವಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಗುಡಿ. ಇದು ಕೆಲ ಭಾಷಾಂದರಿಗೆ, ಕೆಲ ಧರ್ಮಾಂದರಿಗೆ ಉಪ್ಪಿನಕಾಯಿಯ ರುಚಿಯಾಯಿತು. ಕನ್ನಡ- ಮರಾಠಿ ಹೆಸರಿನಲ್ಲಿ ಬೆಂಕಿ ಹೊತ್ತಿಸುವ ಕಿಡಿಯಾಯಿತು. ಕಳೆದ ಆರು ದಶಕಗಳ ಗಡಿ ವಿವಾದಕ್ಕೆ ಗಡಿ-ಬಿಡಿ ಇಲ್ಲ. ಆದರೂ ಗಡಿ ಸಮಸ್ಯೆ ಎಂದು ಬಡಬಡಿಸುತ್ತಿರುವ, ಸೌಹಾರ್ದ ಕದಡುತ್ತಿರುವ ಭಾಷೆಗಳಲ್ಲಿ ವ್ಯತ್ಯಾಸ ಹುಟ್ಟಿಸುತ್ತಿರುವ ಮೂರನೇಯದ್ದು ಯಾವದ್ದು..?
ಛತ್ರಪತಿಯಂಥಹ ಹೆಸರಿಗೆ ಮಸಿ ಬಳೆಯುವ ಕಾರ್ಯ ಕನ್ನಡಗರಿಂದ ಎಂದೂ ನಡೆಯದು, ಛತ್ರಯ ಓರ್ವ ಕನ್ನಡದ ಸಂಸ್ಕಾರಿ, ಕರುನಾಡಿನ ಬೆಳವಲು ಅಂಥದ್ದರಲ್ಲಿ ಛತ್ರಪತಿಯನ್ನು ಅವಮಾನ ಮಾಡುವ ಕುಲ ಕನ್ನಡಿಗರದ್ದಲ್ಲ. ಕನ್ನಡಿಗರು ಸುಸಂಸ್ಕೃತರು. ಕನ್ನಡ, ಮರಾಠಿ ಕಲುಷಿತಗೊಳ್ಳದಿರಲಿ. ಸಂಸ್ಕಾರ ಮುಂದುವರೆಯಲಿ ಶಿವಾಜಿ ಮಹಾರಾಜರಿಗೆ ಆದ ಅವಮಾನವನ್ನು ಕೋಟಿ ಕೋಟಿ ಕನ್ನಡಿಗರು ಖಂಡಿಸುತ್ತಾರೆ. ಇದಕ್ಕೆ ಕ್ಷಮೆ ಇಲ್ಲ.
ಈ ಎಲ್ಲ ಘಟನಾವಳಿಗಳನ್ನು ಪರಿಗಣಿಸಲಾಗಿ ಬೆಳಗಾವಿ ಗಡಿ ಸಮಸ್ಯೆಯನ್ನು ಹೊತ್ತಿಕೊಂಡು ಹಲವು ದಶಕಗಳಿಂದ ತಲೆ ನೋಯಿಸಿಕೊಳ್ಳುತ್ತಿದೆ. ಈ ನೋವು ಕನ್ನಡಗರದ್ದಲ್ಲದೆ, ಮರಾಠಿಗರದ್ದಲ್ಲ, ಗಡಿ, ಗುಡಿ, ಕಲಿಕೆ ಎಲ್ಲವೂ ಕನ್ನಡಿಗರದ್ದೆ. ಸೌಹಾರ್ದತೆ ಕನ್ನಡ, ಮರಾಠಿಯದ್ದು ಆಯಾ ಭಾಷಿಕರದ್ದು ಕನ್ನಡ, ಮರಾಠಿ ಎಲ್ಲವೂ ಸಂಸ್ಕಾರಯುತ, ಸಂಸ್ಕಾರ ಮೀರಿದವರು ಕನ್ನಡಿಗರೂ ಅಲ್ಲ,ಮರಾಠಿಗರು ಅಲ್ಲ ಈ ಎರಡೂ ಹೆಸರು ಹೇಳಿ ನಾವು ಹಿಂದೂಗಳು ಎನ್ನುವವರು ಯಾವುದಕ್ಕೂ ಸಲ್ಲರು. ಇದು ಕನ್ನಡದ ಸಂಸ್ಕಾರ.