ಸಾವಿನ ಕೊನೆ ಕ್ಷಣದಲ್ಲಿ ರೇಣುಕಾಸ್ವಾಮಿ ಪರಿಸ್ಥಿತಿ ಹೇಗಿತ್ತು ಗೊತ್ತಾ…?
ಬೆಂಗಳೂರು : ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೋರ್ಟ್ ಗೆ ತನಿಖಾ ವರದಿ ಸಲ್ಲಿಕೆ ಮಾಡಿದ್ದು ಕೊಲೆ ಪ್ರಕರಣ ಸಂಪೂರ್ಣ ಮಾಹಿತಿ ಕೊಡಲಾಗಿದೆ.
ಹೌದು ಬೆಂಗಳೂರಿನ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿ ಕರೆಯಲಾಗುತ್ತದೆ. ನಂತರ ದರ್ಶನ್ ಹಾಗೂ ಪವಿತ್ರಾ ಗೌಡ ಸ್ಥಳಕ್ಕೆ ಬರುತ್ತಾರೆ. ಈ ಸಂದರ್ಭದಲ್ಲಿ ನಟ ದರ್ಶನ್ ಮೃತ ರೇಣುಕಾಸ್ವಾಮಿಯನ್ನು ಮನಬಂದಂತೆ ಹೊಡೆದು ಕೊಲ್ಲುತ್ತಾನೆ.
ತನಿಖಾ ವರದಿಯಲ್ಲಿ ಕೊಟ್ಟ ಮಾಹಿತಿ ಪ್ರಕಾರ. ನಟ ದರ್ಶನ್ ರೇಣುಕಾಸ್ವಾಮಿಯನ್ನು ಮನಬಂದಂತೆ ಥಳಿಸಿದ್ದು ತನಿಖೆಯಿಂದ ತಿಳಿದುಬಂದಿದೆ. ರೇಣುಕಾಸ್ವಾಮಿ ದರ್ಶನ್ ಹೊಡೆತದಿಂದಲೇ ಜೀವ ಬಿಟ್ಟಿದ್ದು ತಿಳಿದುಬಂದಿದೆ.
ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆತಂದು ಮನಸೋ ಇಚ್ಛೆ ಹಲ್ಲೆ ಮಾಡಿದ ಬಳಿಕ ಕೆಲ ಆರೋಪಿಗಳು ಸ್ವಾಮಿಯ ರಕ್ತಸಿಕ್ತ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಮೊಬೈಲ್‌ನಲ್ಲಿ
ಸೆರೆಹಿಡಿದಿದ್ದರು. ರೇಣುಕಾಸ್ವಾಮಿ ಸಾವಿನ ಬಳಿಕ ಆ ಫೋಟೋ ಹಾಗೂ ವಿಡಿಯೊಗಳನ್ನು ಡಿಲೀಟ್ ಮಾಡಿದ್ದರು. ನಂತರ ಆರೋಪಿಗಳನ್ನು ಬಂಧಿಸಿ ಮೊಬೈಲ್‌ಗಳನ್ನು ವಶಕ್ಕೆ ಪಡೆದು, ದತ್ತಾಂಶ ರಿಟ್ರೈವ್(ವಾಪಸ್) ಮಾಡಲಾಗಿದೆ.