ಲೈಟ್ ಮ್ಯಾನ್ ಸಾವು ; ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ FIR ದಾಖಲು
ಬೆಂಗಳೂರು : ಲೈಟ್ ಮ್ಯಾನ್ ಮೃತಪಟ್ಟ ಹಿನ್ನಲೆಯಲ್ಲಿ ಖ್ಯಾತ ಸಿನೆಮಾ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿದ್ದೆ.
ಸೆ. 3 ರಂದು ಅಡಕಮಾರನಹಳ್ಳಿಯಲ್ಲಿ ಮನದ ಕಡಲು ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಲೈಟ್ ಮ್ಯಾನ್ ಮೋಹನ್ ಎಂಬುವವರು ಸುಮಾರು 30 ಅಡಿ ಮೇಲಿನಿಂದ ಬಿದ್ದು ಸಾವಣಪ್ಪಿದ್ದರು.
ಅಜಾಗರೂಕತೆ, ನಿರ್ಲಕ್ಷ್ಯದಿಂದ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ನಿರ್ದೇಶಕ ಯೋಗರಾಜ್ ಭಟ್ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.