Select Page

Advertisement

ನಡುರಸ್ತೆಯಲ್ಲಿ ಹಡೆದವ್ವನ ಬಿಟ್ಟಿದ್ದ ಮಗ : ಕೊನೆಗೂ ಮನೆ ಸೇರಿದ ವೃದ್ಧ ತಾಯಿ

ನಡುರಸ್ತೆಯಲ್ಲಿ ಹಡೆದವ್ವನ ಬಿಟ್ಟಿದ್ದ ಮಗ : ಕೊನೆಗೂ ಮನೆ ಸೇರಿದ ವೃದ್ಧ ತಾಯಿ



ಬೆಳಗಾವಿ : ಹೆತ್ತ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಮಗ ಪರಾರಿಯಾದ ಘಟನೆ ಬೆನ್ನಲ್ಲೇ ಕೊನೆಗೂ ಹಡೆದವ್ವನನ್ನು ಮರಳಿ ಮನೆಗೆ ಕರೆದೊಯ್ಯುವ ಮೂಲಕ ಮಗ ಮಾಡಿದ ತಪ್ಪಿಗೆ ನೋವುಂಡ ಘಟನೆ ನಡೆದಿದೆ.

ಹೌದು ಕಳೆದ ಮೂರು ದಿನಗಳ ಹಿಂದೆ ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದ ನಿರ್ಜನ ಪ್ರದೇಶದಲ್ಲಿ ಹೆತ್ತ ತಸಯಿಯನ್ನು ಬಿಟ್ಟು ಮಗ ಪರಾರಿಯಾಗಿದ್ದ. ಅಲ್ಲೇ ಒಂದು ರಾತ್ರಿ ಕಳೆದ ತಾಯಿ ಮರುದಿನ ಬೆಳಿಗ್ಗೆ ಮಗನ ಕ್ರೌರ್ಯ ಬಿಚ್ಚಿಟ್ಟ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ವ್ಯಕ್ತಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಧ್ಯ ಹೆತ್ತ ತಾಯಿಯನ್ನು ಮಗ ವಾಪಸ್ ಮನೆಗೆ ಕರೆದೊಯ್ದಿದ್ದಾನೆ.‌ ದೌರ್ಜನ್ಯ ಎಸಗಿದ ಕೆಎಸ್ಆರ್ ಟಿಸಿ ನೌಕರ ಸಂತೋಷ್ ಕಟ್ಟಿ ವಿರುದ್ಧ ವಕೀಲ ಮಲ್ಲಿಕಾರ್ಜುನ ಚೌಕಾಶಿ ಚಿಕ್ಕೋಡಿ ವಿಭಾಗೀಯ ವ್ಯವಸ್ಥಾಪಕರಿಗೆ ದೂರು ನೀಡಿದ್ದರು.

ಕೊನೆಗೂ ಈ ನೌಕರ ತನ್ನ ತಾಯಿಯನ್ನು ಮನೆಗೆ ಕರೆದೊಯ್ದಿದ್ದಾನೆ. ಅಷ್ಟೇ ಅಲ್ಲದೆ ಈ ವ್ಯಕ್ತಿ ಸಾರಿಗೆ ನೌಕರರಿಗೆ ಬಡ್ಡಿ ಹಣದ ಕುರುಕುಳ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು ಇತನ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.


Advertisement

Leave a reply

Your email address will not be published. Required fields are marked *

error: Content is protected !!