ಚಿಕ್ಕೋಡಿಯಲ್ಲಿ ನೂತನ ಸಂಚಾರಿ ಪೊಲೀಸ್ ಠಾಣೆ ಉದ್ಘಾಟನೆ : ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘಿಸಿದ -ಪ್ರಭಾಕರ್ ಕೋರೆ
ಚಿಕ್ಕೋಡಿ : ಪೋಲಿಸರು ತಮ್ಮ ಕುಟುಂಬದ ಸಂಕಷ್ಟಗಳನ್ನು ಬಿಟ್ಟು ಸಾರ್ವಜನಿಕರಿಗೆ ಸ್ಪಂದಿಸುತ್ತಾರೆ. ಪೋಲಿಸರನ್ನು ದೂರುವದು ಸಾರ್ವಜನಿಕರ ಕೆಲಸವಾಗಿ ಬಿಟ್ಟಿದೆ, ಆದರೆ ಬೆಳಗಾವಿ ಜಿಲ್ಲಾ ಪೊಲೀಸರ ಕರ್ತವ್ಯ ಶ್ಲಾಘನೀಯವಾಗಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಅಭಿಪ್ರಾಯಪಟ್ಟರು.
ಭಾನುವಾರ ನೂತನವಾಗಿ ನಿರ್ಮಿಸಲಾದ ಚಿಕ್ಕೋಡಿ ಟ್ರಾಪೀಕ ಪೋಲಿಸ್ ಠಾಣೆ ಉದ್ಘಾಟನಾ ಸಮಾರಂಭ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಗಣೇಶ್ ಹುಕ್ಕೇರಿ. ಚಿಕ್ಕೋಡಿಯಲ್ಲಿ ಈ ಹಿಂದೆಯೇ ಪೊಲೀಸ್ ಠಾಣೆ ಉದ್ಘಾಟನೆ ನೆರವೇರಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿದೆ. ಈಗಾಗಲೇ ನಿರ್ಮಿಸಿರುವ ನೂತನ ನ್ಯಾಯಾಲಯ ಕಟ್ಟಡಕ್ಕೆ ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ, ಶಾಸಕ ದುರ್ಯೋಧನ ಐಹೊಳೆ, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.