Video-ಕೂಡಲಸಂಗಮದಲ್ಲಿ ಸಿದ್ದೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆ
ವಿಜಯಪುರ : ಶತಮಾನದ ಸಂತ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ನಮ್ಮನ್ನ ಅಗಲಿ ಇಂದಿಗೆ ಆರು ದಿನಗಳಾಗಿವೆ. ನಾಳೆ ಜ.8 ರಂದು ಏಳು ದಿನಗಳ ನಂತರ ಭಾನುವಾರ ಶ್ರೀಗಳ ಅಸ್ಥಿ ವಿಸರ್ಜನೆ ಕಾರ್ಯಕ್ರಮ ನಡೆಯಿತು.
ಕಳೆದ ಸೋಮವಾರ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದರು. ಇವರು ಹೇಳಿದಂತೆ ಅವರ ಅಂತಿಮ ಕ್ರಿಯೆಗಳು ನೆರವೇರಿದ್ದು ಯಾವುದೇ ಆಡಂಬರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಶ್ರೀಗಳ ಕೊನೆಯ ಆಸೆಯಂತೆ ಶರೀರವನ್ನು ಹೂಳದೆ ಅಗ್ನಿಸ್ಪರ್ಷ ಮಾಡಲಾಗಿದೆ. ಹಾಗೆಯೇ ಅವರ ಆಸೆಯಂತೆ ಅವರ ಅಸ್ಥಿಯನ್ನು ನದಿ, ಹಾಗೂ ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುತ್ತದೆ.
ಭಾನುವಾರ ಬೆಳಿಗ್ಗೆ ವಿಜಯಪುರದ ಜ್ಞಾನ ಯೋಗಾಶ್ರಮದಿಂದ ಶ್ರೀಗಳ ಅಸ್ಥಿಯನ್ನು ತಗೆದುಕೊಂಡು ಮೊದಲು ಬಾಗಲಕೋಟೆ ಜಿಲ್ಲೆಯ ಬಸವಣ್ಣನವರು ಐಕ್ಯ ಹೊಂದಿರುವ ಕೂಡಲಸಂಗಮದಲ್ಲಿ ಅಸ್ಥಿ ಸಮರ್ಪಣಾ ಕಾರ್ಯ ನೆರವೇರಿತು. ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮ ಈ ಜಾಗದಲ್ಲಿ ಆಗುತ್ತಿದ್ದು ಈ ಪವಿತ್ರ ಸಂಗಮದಲ್ಲಿ ಸಿದ್ದೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆ ಕಾರ್ಯ ನೆರವೇರಿತು.
ಈ ಸಂದರ್ಭದಲ್ಲಿ ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಉಪಸ್ಥಿತರಿದ್ದರು.