ಯಮಕನಮರಡಿಯಲ್ಲಿ ಹಿಂದೂ ಗರ್ಜನೆ : ಸತೀಶ್ ಜಾರಕಿಹೊಳಿ ವಿರುದ್ಧ ಗುಡುಗಿದ ಸೂಲಿಬೆಲೆ
ಬೆಳಗಾವಿ : ಅಂಬೇಡ್ಕರ್ ಅವರಂತ ಧೀಮಂತ ವ್ಯಕ್ತಿಗಳೇ ಹಿಂದೂ ಧರ್ಮದ ಕುರಿತು ಮಾತಮಾಡಿಲ್ಲ. ಅವರ ಹೆಸರು ಹೇಳಿಕೊಂಡು ಧರ್ಮದ ವಿರುದ್ಧ ಮಾತನಾಡಿವ ಒಬ್ಬರಿಂದ ನಮ್ಮ ಹಿಂದೂ ಧರ್ಮ ಅಲ್ಲಾಡುವುದಿಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.
ಯಮಕನಮರಡಿ ಪಟ್ಟಣದಲ್ಲಿ ನಡೆದ ನಾನು ಹಿಂದೂ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಇವರು. ಹಿಂದೂ ಧರ್ಮದ ಕುರೊತಾಗಿ ಯಾರೋ ಒಬ್ಬರು ಮಾತನಾಡಿದರೆ ಈ ಧರ್ಮ ಅಲ್ಲಾಡುವುದಿಲ್ಲ. ಹಿಂದೂ ಪದದ ಅರ್ಥ ಅಶ್ಲೀಲ ಎಂದು ಯಾವುದೋ ಡಿಕ್ಷನರಿ ನೋಡಿ ಹೇಳಿದವರಿಗೆ ನಂತರ ಅದು ಯಾವ ಡಿಕ್ಷನರಿ ಎಂಬುವುದೇ ನೆನಪಿಲ್ಲ ಎಂದು ಸತೀಶ್ ಜಾರಕಿಹೊಳಿ ಹೆಸರಿಸದೆ ಸೂಲಿಬೆಲೆ ವಾಗ್ದಾಳಿ ನಡೆಸಿದರು.
ನನ್ನ ಧರ್ಮ ಹಾಗೂ ತಾಯಿಗೆ ಮಾತನಾಡಿದಾಗ ಅವರ ಕ್ಷೇತ್ರಕ್ಕೆ ಹೋಗಿ ತಕ್ಕ ಉತ್ತರ ನೀಡಬೇಕು ಅನಿಸಿತು. ಹಿಂದೂ ಪದದ ಅರ್ಥ ಅಶ್ಲೀಲ ಎಂದವರಿಗೆ ತಕ್ಕ ಉತ್ತರ ನೀಡಬೇಕೆಂಬ ಉದ್ದೇಶದಿಂದಲೇ ಬಂದಿರುವೆ. ನನ್ನನ್ನು ವೈಯಕ್ತಿಕವಾಗಿ ಟೀಕೆ ಮಾಡಿದರೆ, ಜಾತಿಯಿಂದ ಟೀಕೆ ಮಾಡಿದರೆ ಸುಮ್ಮನಿರುವೆ ಆದರೆ ಧರ್ಮದ ವಿಷಯಕ್ಕೆ ಬಂದರೆ ನಾವು ಸುಮ್ಮನಿರುವುದಿಲ್ಲ ಎಂದು ಸೂಲಿಬೆಲೆ ಗುಡುಗಿದರು.
ಹಿಂದೂ ಧರ್ಮ ವಿಜ್ಞಾನ ಇದ್ದಹಾಗೆ. ಇದಕ್ಕೆ ಸಂಸ್ಥಾಪಕರು ಇಲ್ಲ. ಅಳಿದು ಹೋಗುವ ಧರ್ಮ ಹಿಂದೂ ಧರ್ಮವಲ್ಲ.
ಹಿಂದೂ ಪರ್ಷಿಯಾದಿಂದ ಬಂದಿದ್ದು ಅಂತ ಇವರು ಹೇಳುತ್ತಾರೆ.ಹಿಂದೂ ರಾಷ್ಟ್ರ ಅಂದು ಕರಿಯುವುದು ಸಪ್ತ ಸಿಂಧೂ ರಾಷ್ಟ್ರ ಅನ್ನುವಂತದ್ದು, ಏಳು ನದಿಗಳನ್ನು ಪ್ರತಿನಿತ್ಯ ಸ್ಮರಿಸಿ ಸ್ನಾನ ಮಾಡುತ್ತೇವೆ. ಪ್ರಾಕೃತ ಭಾಷೆಯಲ್ಲಿ ಸಕಾರ ಹಕಾರ ಆಗುವುದರಿಂದ ಹಫ್ತ್ ಹಿಂದೂ ಅಂತಾ ಬಳಸಿದ್ದರು. ಹಿಂದೂ ಅಲ್ಲಿಂದ ಬಂದಿದಲ್ಲ ಸಪ್ತ ಹಿಂದೂ ಅಲ್ಲಿ ಹೋಗಿದ್ದು ಎಂದರು.
ಹಿಂದೂಗಳು ಈಗ ಜಾಗೃತರಾಗಿದ್ದಾರೆ. ಮೊದಲಿನಂತೆ ನಾಲಿಗೆ ಹರಿಬಿಟ್ಟರೆ ಯುವಕರು ಸ್ಪಷ್ಟ ಉತ್ತರ ನೀಡುತ್ತಾರೆ. ಹಲಾಲ್ ವಿಚಾರವಾಗಿ ಹಿಂದೂ ಯುವಕರು ಬೀದಿಗೆ ಬಂದು ನಿಲ್ಲುತ್ತಾರೆ. ಏನೋ ಮಾತನಾಡುತ್ತೇವೆ ಎಂದರೆ ಈಗ ನಡೆಯುವುದಿಲ್ಲ. ಅನ್ಯ ಧರ್ಮದ ವಿರುದ್ಧ ಮಾತನಾಡುವ ಶಕ್ತಿ ತೋರಿಸದ ಹಲವರು ಹಿಂದೂ ಧರ್ಮದ ವಿರುದ್ಧ ನಾತನಾಡುವ ಚಾಳಿ ಬಿಡಬೇಕು ಎಂದರು.
*****************
ಹಿಂದೂ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದವರ ಕ್ಷೇತ್ರಕ್ಕೆ ಬಂದು ತಕ್ಕ ಪ್ರತ್ಯುತ್ತರ ನೀಡಿದ್ದೇವೆ. ಧರ್ಮದ ವಿಷಯದಲ್ಲಿ ಯಾರೇ ಮಾತನಾಡಿದರು ಹಿಂದೂ ಸಮಾಜ ಖಂಡಿಸುತ್ತದೆ. ಅಂಬೇಡ್ಕರ್ ಅವರಂತ ಮಹಾನ್ ವ್ಯಕ್ತಿಗಳೇ ಹಿಂದೂ ಧರ್ಮದ ವಿರುದ್ಧ ಮಾತನಾಡಿಲ್ಲ. ಅವರ ಹೆಸರು ಹೇಳಿ ಧರ್ಮಕ್ಕೆ ಅವಮಾನ ಮಾಡುವವರಿಗೆ ತಕ್ಕ ಉತ್ತರ ನೀಡುತ್ತೇವೆ.
ಚಕ್ರವರ್ತಿ ಸೂಲಿಬೆಲೆ
ಚಿಂತಕ
************