ವಿದ್ಯಾರ್ಥಿನಿಯನ್ನು ಹೆಗಲಮೇಲೆ ಹೊತ್ತು ಶಿಕ್ಷಕನ ಭರ್ಜರಿ ಡ್ಯಾನ್ಸ್ ; Video ವೈರಲ್
ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕ ತಮ್ಮದೇ ವಿದ್ಯಾರ್ಥಿನಿಯನ್ನು ಬೆನ್ನ ಮೇಲೆ ಕೂರಿಸಿಕೊಂಡು ನೃತ್ಯ ಮಾಡಿರುವ ವೀಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ವಿದ್ಯಾರ್ಥಿಗಳೊಂದಿಗೆ ಡ್ಯಾನ್ಸ್ ಮಾಡಿದ ಶಿಕ್ಷಕನ ಹೆಸರು ಪಂಪಾಪತಿ ಎಂದು. ವಿಶ್ವ ವಿದ್ಯಾಲಯದ ದೈಹಿಕ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಸಂದರ್ಭದಲ್ಲಿ ಯುವತಿಯನ್ನು ಹೊತ್ತು ಶಿಕ್ಷಕ ಡ್ಯಾನ್ಸ್ ಮಾಡಿದ್ದಾನೆ.
ಇನ್ನೂ ಶಿಕ್ಷಕ ವಿದ್ಯಾರ್ಥಿನಿಯನ್ನು ಬೆನ್ನಮೇಲೆ ಕೂರಿಸಿಕೊಂಡು ನೃತ್ಯ ಮಾಡಿದ್ದಾನೆ. ಸಧ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಶಿಕ್ಷಕನ ಕುಣಿತಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.