ಸವದಿ ಕಾಂಗ್ರೆಸ್ ಸೇರ್ಪಡೆ ನಿಶ್ಚಿತ : ಅಥಣಿ ಅಖಾಡಕ್ಕೆ ಸಂಘದ ಪ್ರಮುಖರು?
ಬೆಳಗಾವಿ : ಅಥಣಿ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಆಗುವುದು ಖಚಿತವಾದ ಬೆನ್ನಲ್ಲೇ ಅಥಣಿ ಅಖಾಡಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ಕಾರ್ಯಾಚರಣೆಗೆ ಸಿದ್ದತೆ ಮಾಡಿಕೊಂಡಿದ್ದಾರೆ.
ಸವದಿ ಕಾಂಗ್ರೆಸ್ ಸೇರ್ಪಡೆ ನಂತರ ಅಥಣಿಯಲ್ಲಿ ಬಿಜೆಪಿ ಸಾಂಪ್ರದಾಯಿಕ ಮತಗಳು ಚದುರದಂತೆ ಹಾಗೂ ಬಿಜೆಪಿ ಬೆಂಬಲಕ್ಕೆ ನಿಲ್ಲುವಂತೆ ಆರ್ ಎಸ್ ಎಸ್ ಮೆಗಾ ತಂತ್ರ ಒಂದನ್ನು ಮಾಡಿದ್ದು, ಮಿಂಚಿನ ಕಾರ್ಯಾಚರಣೆಗೆ ಇಳಿದಿದೆ. ಈಗಾಗಲೇ ಸವದಿ ಟಿಕೆಟ್ ನಿರಾಕರಣೆಗೆ ಸಂಘ ಪ್ರಮುಖರ ಶಿಪಾರಸ್ಸು ಪ್ರಮುಖ ಕಾರಣವಾಗಿತ್ತು.
ಲಕ್ಷ್ಮಣ ಸವದಿ ನಿನ್ನೆ ನಡೆಸಿದ್ದ ಸ್ವಾಭಿಮಾನಿ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಆದರೆ ಆ ವ್ಯಕ್ತಿಗೆ ನಾವು ಅಷ್ಟೊಂದು ಅವಕಾಶ ಕೊಟ್ಟರು ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಆಕ್ರೋಶ ಪಕ್ಷ ಹಾಗೂ ಸಂಘದಲ್ಲಿ ಕೇಳಿಬಂದಿದ್ದು, ಜನರ ಮುಂದೆ ಸತ್ಯಾಸತ್ಯತೆ ಬಯಲು ಮಾಡುವತ್ತ ಗಮನ ಹರಿಸಿದೆ ಎಂದು ತಿಳಿದುಬಂದಿದೆ.
ಅಥಣಿಯಲ್ಲಿ ಬಿಜೆಪಿ ಪ್ರಮುಖರು ಎಂಟ್ರಿ ಸಾಧ್ಯತೆ : ಟಿಕೆಟ್ ಕಾರಣಕ್ಕೆ ಪಕ್ಷ ತ್ಯಜಿಸುವ ಮೂಲಕ ಸ್ವಾರ್ಥ ರಾಜಕಾರಣ ಮಾಡಿದ್ದಾರೆ ಎಂಬ ಆರೋಪ ಸವದಿ ವಿರುದ್ಧ ಬಿಜೆಪಿ ಮಾಡದೆ. ಈ ಕಾರಣದಿಂದ ಬಿಜೆಪಿ ಹಿರಿಯ ನಾಯಕರು ಲಕ್ಷಣ ಸವದಿ ವಿರುದ್ಧ ಪ್ರಚಾರಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಹಾಗೆಯೇ ಶಾಸಕ ಬಸನಗೌಡ ಯತ್ನಾಳ್ ಅವರು ಅಥಣಿ ಅಖಾಡಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದೆ.