Select Page

Advertisement

ಬಸ್ ನಿಲ್ಲಿಸದ ಚಾಲಕ ; ತಲೆಕೆಟ್ಟು ಕಲ್ಲು ಹೊಡೆದು ಬಸ್ ಕಿಟಕಿ ಪೀಸ್ ಮಾಡಿದ ಮಹಿಳೆ

ಬಸ್ ನಿಲ್ಲಿಸದ ಚಾಲಕ ; ತಲೆಕೆಟ್ಟು ಕಲ್ಲು ಹೊಡೆದು ಬಸ್ ಕಿಟಕಿ ಪೀಸ್ ಮಾಡಿದ ಮಹಿಳೆ

ಕೊಪ್ಪಳ : ರಾಜ್ಯದಲ್ಲಿ ಮಹಿಳೆಯರು ಬಸ್ ಬಸ್ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ಜಾರಿಯಾದ ನಂತರ ಹಲವು ರೀತಿಯ ಅವಘಡಗಳು ನಡೆಯುತ್ತಿವೆ.

ಬಸ್ ಗಳು ಫುಲ್ ರಷ್ ಆಗುವ ಹಿನ್ನಲೆ ಕಾದು ಕಾದು ಸುಸ್ತಾಗಿ ಮಹಿಳೆಯೊಬ್ಬಳು ಬಸ್‌ಗೆ ಕಲ್ಲು ಹೊಡೆದ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ನಡೆದಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯಲ್ಲೊಂದಾದ ಶಕ್ತಿ ಯೋಜನೆ ಜಾರಿಯಾದ ಎಫೆಕ್ಟ್ ನಿಂದಾಗಿ ಈಗ ಜನರ ಆಕ್ರೋಶ ವ್ಯಕ್ತವಾಗುತ್ತಿದೆ. 

ನಾಲ್ಕು ತಾಸು ಕಾಯ್ದರು ಬಸ್ ನಿಲ್ಲಿಸದ ಹಿನ್ನಲೆಯಲ್ಲಿ ಮಹಿಳೆಯೊಬ್ಬಳು ಬಸ್ ಗೆ ಕಲ್ಲೆಸೆದಿದ್ದಾಳೆ. ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್‌ಗೆ ಕಲ್ಲೆಸೆದಿದ್ದು ಬೇಜಾರಿನಿಂದಾಗಿ ತಲೆಕೆಟ್ಟಂತಾಗಿ ಕಲ್ಲು ಎಸೆದೆ ಎನ್ನುತ್ತಾಳೆ.

ಇದರಿಂದಾಗಿ ಬಸ್ ಗಾಜು ಪುಡಿಪುಡಿಯಾಗಿತ್ತು. ಕಲ್ಲು ಎಸೆದ ಹಿನ್ನೆಲೆಯಲ್ಲಿ ಬಸ್ ಚಾಲಕ ಹಾಗು ನಿರ್ವಾಹಕ ಪ್ಯಾಸೆಂಜರ್ ಸಮೇತ ಬಸ್‌ನ್ನು ಮುನಿರಾಬಾದ್  ಪೊಲೀಸ್ ಠಾಣೆಗೆ ಬಸ್ ತಂದಿದ್ದರು. ಪಾಪಿನಾಯಕಹಳ್ಳಿಯ ಲಕ್ಷ್ಮಿ ಹಾಗು ಆಕಿಯೊಂದಿಗೆ ಇನ್ನೋರ್ವ ಮಹಿಳೆ ಭಾನುವಾರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದರು. 

Advertisement

Leave a reply

Your email address will not be published. Required fields are marked *

error: Content is protected !!