
ಶನಿವಾರ ಬೇಡ ಜಂಗಮರ ಹೋರಾಟ ಬೆಂಬಲಿಸಿ ನೂರಾರು ಮಠಾಧೀಶರು ಫ್ರೀಡಂ ಪಾರ್ಕನಲ್ಲಿ ಭಾಗಿ

ಬೆಂಗಳೂರು : ಬೇಡ ಜಂಗಮರಿಗೆ ಸಾಂವಿಧಾನಿಕ ಮೀಸಲಾತಿ ಕಲ್ಪಿಸುವ ಹೋರಾಟದ ಭಾಗವಾಗಿ, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಸತ್ಯ ಪ್ರತಿಪಾದನಾ ಹೋರಾಟದ ಅಂಗವಾಗಿ ನಾಳೆ ಶನಿವಾರ ಜುಲೈ 23 ರಂದು ನೂರಾರು ಮಠಾಧೀಶರು ಭಾಗವಹಿಸಿ ಬೆಂಬಲ ನೀಡಲಿದ್ದಾರೆ.
ಬೇಡ ಜಂಗಮ ಹೋರಾಟ ಸಮೀತಿ ರಾಜ್ಯಾಧ್ಯಕ್ಷ ಬಿ.ಡಿ ಹಿರೇಮಠ ಅವರ ನಾಯಕತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ ನಲ್ಲಿ ಕಳೆದ ಜುನ್ 30 ರಿಂದ ಸತ್ಯ ಪ್ರತಿಪಾದನಾ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಈ ಹೋರಾಟಕ್ಕೆ ರಾಜ್ಯಾದ್ಯಂತ ಜಂಗಮರು ಕೈ ಜೋಡಿಸಿದ್ದಾರೆ. ಇನ್ನೂ ರಾಜ್ಯ ಹಾಗೂ ಹೊರರಾಜ್ಯದ ನೂರಾರು ಮಠಾಧೀಶರು ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಜುಲೈ 23 ರಂದು ಶನಿವಾರ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಮುಖರು ತಿಳಿಸಿದ್ದಾರೆ.

ಹೋರಾಟಕ್ಕೆ ಪಕ್ಷಾತೀತ ಬೆಂಬಲ : ಬೇಡ ಜಂಗಮರಿಗೆ ಸಾಂವಿಧಾನಿಕ ಹಕ್ಕು ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಪಕ್ಷಾತೀತ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್, ಶಾಸಕಿ ಅಂಜಲಿ ನಿಂಬಾಳ್ಕರ್, ಹಿಂದೂಪರ ಹೋರಾಟಗಾರ ಪ್ರಮೋದ್ ಮುತಾಲಿಕ್ ಸೇರಿದಂತೆ ಅನೇಕರು ಬೆಂಬಲ ಸೂಚಿಸಿದ್ದು ಹೋರಾಟದ ಕಾವು ಮತ್ತಷ್ಟು ಜಾಸ್ತಿಯಾಗಿದೆ.

ಸಂವಿಧಾನದಲ್ಲಿ ಬೇಡ ಜಂಗಮರಿಗೆ ಸ್ಥಾನ : ಬೇಡ ಜಂಗಮ ಜಾತಿಯನ್ನು ಸಂವಿಧಾನದ 341 ಪರಿಚ್ಛೇದದ ಅಡಿಯಲ್ಲಿ ಪರಿಶಿಷ್ಟ ಜಾತಿಗೆ ಸೇರ್ಪಡಿಸಲಾಗಿದೆ. ಜಾತಿ ಗಣತಿಯ ಕ್ರಮ ಸಂಖ್ಯೆ 19 ರಲ್ಲಿಯು ಬೇಡ ಜಂಗಮ ಜಾತಿ ಹೆಸರು ಸೂಚಿಸಲಾಗಿದ್ದು ಈ ಹಿನ್ನಲೆಯಲ್ಲಿ ರಾಜ್ಯ ಸಕರ್ಸರ ಬೇಡ ಜಂಗಮರಿಗೆ ಸಿಗಬೇಕಾದ ಸಂವಿಧಾನಿಕ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
