
ಬೆಳಗಾವಿ : ಪ್ರೀತಿಸಿದವಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ

ಬೆಳಗಾವಿ ನಗರದ ಬಸವಕಾಲೋನಿಯಲ್ಲಿ ಪ್ರೀತಿ ಸಿಗದ ಕಾರಣ ಯುವತಿಯನ್ನು ಕೊಲೆಗೈದು ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಮೂಲತಃ ಸವದತ್ತಿಯ ಮೂಲದನಾದ ನರ್ಸಿಂಗ್ ಮಾಡುತ್ತಿದ್ದ ರೇಣುಕಾನನ್ನು ಕೊಲೆ ಮಾಡಿದ ರಾಮಚಂದ್ರ ಬಸಪ್ಪ ತೆಣಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಎಪಿಎಂಸಿ ಸಿಪಿಐ ಮಂಜುನಾಥ ಹಿರೇಮಠ ಸೇರಿದಂತೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.