ಅರಣ್ಯ ಸಚಿವರ ಜಿಲ್ಲೆಯಲ್ಲಿ ವಾಚರನ್ ಅರಣ್ಯ ರೋಧನೆ
ಬೆಳಗಾವಿ : ಅರಣ್ಯ ಇಲಾಖೆಯಲ್ಲಿ ಗುತ್ತಿಗೆಯಾದಾರದ ಮೇಲೆ ವಾಚರ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಕಾಡುಕೋಣಗಳನ್ನು ಅರಣ್ಯಕ್ಕೆ ಮರಳಿಸುವ ವೇಳೆ ಏಕಾಏಕಿ ದಾಳಿ ನಡೆಸಿ ಮೂರು ತಿಂಗಳು ಕಳೆದರೂ ಇಲ್ಲಿಯವರೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಿಲ್ಲ ಎಂದು ಚಿಕ್ಕೋಡಿ ತಾಲೂಕಿನ ಅತರಾಳ ಗ್ರಾಮದ ಕೃಷ್ಣಾ ಗುರವ ದೂರಿದ್ದಾರೆ.
ಐದು ವರ್ಷದಿಂದ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ಐದೂವರೆ ಸಾವಿರ ಸಂಬಳ ನೀಡುತ್ತಾರೆ. ಕನಿಷ್ಠ ವೇತನ ನೀಡುವಂತೆ ನ್ಯಾಯಾಲಯಕ್ಕೆ ಹೋಗಿದ್ದೇವು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡುಕೋಣಗಳು ಬಂದಿದ್ದಾವೆ ಎಂದು ರಾಯಬಾಗಕ್ಕೆ ಕಳುಹಿಸಿದರು. ಆಗ ಕಾಡುಕೋಣ ದಾಳಿ ಮಾಡಿದವು. ಆಗ ಅರಣ್ಯ ಇಲಾಖೆಯವರು ನಿನಗೆ ಕಾಯಂ ಮಾಡಿಕೊಳ್ಳುತ್ತೇವೆ. ನಿನ್ನ ಆಸ್ಪತ್ರೆಯ ಖರ್ಚು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು.
ಕಾಡುಕೋಣಗಳು ದಾಳಿ ಮಾಡಿದ ಸಂದರ್ಭದಲ್ಲಿ ಸ್ವಲ್ಪ ಹಣ ನೀಡಿದ್ದರು. ಅಲ್ಲಿಂದ ನಮ್ಮ ಬೇಡಿಕೆಗೆ ಯಾರೂ ಸ್ಪಂದಿಸುತ್ತಿಲ್ಲ. ನಾನು ಇನ್ನೂ ಆಸ್ಪತ್ರೆಗೆ ಅಲೇದಾಡುತ್ತಿದ್ದೇನೆ. ಕೈಯಲ್ಲಿ ಕಾಸಿಲ್ಲ. ಅರಣ್ಯ ಇಲಾಖೆಯ ಅಧಿಕಾರಿ ವರ್ಗಾವಣೆಯಾಗಿದ್ದಾರೆ. ನಮಗೆ ಪರಿಹಾರವನ್ನು ಕೊಟ್ಟಿಲ್ಲ ಎಂದು ದೂರಿದ್ದರು.