ಮಂಗಳೂರು : ಸಾರಿಗೆ ಬಸ್ ನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ (Sexual Harassment) ನೀಡಿರುವ ಅತ್ಯಂತ ಆಘಾತಕಾರಿ (Shocking) ಮತ್ತು ಹೀನ ಕೃತ್ಯವೊಂದು ಬೆಳಕಿಗೆ ಬಂದಿದೆ.

ಜುಲೈ 9, 2026ರ ಗುರುವಾರ ಸಂಜೆ ಸುಮಾರು 5 ಗಂಟೆಯ ವೇಳೆಗೆ ಬಸ್ ಎಂದಿನಂತೆ ಮಂಗಳೂರು – ವಿಟ್ಲ್ ಮಾರ್ಗವಾಗಿ ಸಂಚರಿಸುತ್ತಿದ್ದಾಗ ಈ ಆಘಾತಕಾರಿ ಘಟನೆ ಸಂಭವಿಸಿದೆ.

ಬಂಧಿತ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕಲ್ಲೇರಿ ಮನೆ ನಿವಾಸಿಯಾಗಿದ್ದು ಪ್ರಸ್ತುತ ಉಪ್ಪಿನಂಗಡಿ ಕಡೇಲು ಎಂಬಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಇಬ್ರಾಹೀಂ (32) ಎಂದು ಗುರುತಿಸಲಾಗಿದೆ.
ಈತ ಮಂಗಳೂರು ಮತ್ತು ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿನಿತ್ಯ ಬಸ್‌ನಲ್ಲಿ ಶಾಲಾ-ಕಾಲೇಜುಗಳಿಗೆ ಪ್ರಯಾಣಿಸುವ ಮುಗ್ಧ ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿಕೊಂಡು ಈ ವಿಕೃತಿ ಮಾಡಲಾಗಿತ್ತು. ಬಸ್ ನಿರ್ವಾಹಕ (ಕಂಡಕ್ಟರ್) ತನಗಿದ್ದ ಅಧಿಕಾರ ಹಾಗೂ ಜವಾಬ್ದಾರಿಯನ್ನು ಮರೆತು, ವಿದ್ಯಾರ್ಥಿನಿಯರಿಗೆ ಸರತವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಅಷ್ಟೇ ಅಲ್ಲದೆ ಈ ಕಾಮುಕ ಕಂಡಕ್ಟರ್, ಬಸ್‌ನಲ್ಲೇ ವಿದ್ಯಾರ್ಥಿನಿಯರ ಎದುರು ತನ್ನ ಗುಪ್ತಾಂಗ ಪ್ರದರ್ಶಿಸಿ ವಿಕೃತ ಆನಂದ ಅನುಭವಿಸಿದ್ದಾನೆ. ಇದರಿಂದ ತೀವ್ರ ಭಯಭೀತರಾದ ಮತ್ತು ಮುಜುಗರಕ್ಕೊಳಗಾದ ವಿದ್ಯಾರ್ಥಿನಿಯರು ಕೊನೆಗೂ ಧೈರ್ಯ ಮಾಡಿ ಈ ಅಸಭ್ಯ ವರ್ತನೆಯ ಬಗ್ಗೆ ಪೋಷಕರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಗುಟ್ಟನ್ನು ತಿಳಿಸಿದ್ದಾರೆ.

ಘಟನೆಯ ಗಂಭೀರತೆಯನ್ನು ಅರಿತು ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ವಿಕೃತ ಮನಸ್ಸಿನ ಆರೋಪಿ ಕಂಡಕ್ಟರ್‌ನನ್ನು ಹೆಡೆಮುರಿ ಕಟ್ಟಿಕೊಂಡು ಬಂಧಿಸಿದ್ದಾರೆ. ಸದರಿ ಆರೋಪಿಯ ವಿರುದ್ಧ ಕಠಿಣ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.