ಚನ್ನಮ್ಮನ‌ ಕಿತ್ತೂರು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ರೈತರ ಬೃಹತ್ ಪಾದಯಾತ್ರೆ ಆರಂಭಗೊಂಡಿದೆ.

​ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಚೂನಪ್ಪ ಪೂಜೇರ ಮತ್ತು ಗೌರವ ಅಧ್ಯಕ್ಷ ಶಶಿಕಾಂತ ಗೂರುಜಿ ಅವರ ನೇತೃತ್ವದಲ್ಲಿ ಈ ಪ್ರತಿಭಟನಾ ಪಾದಯಾತ್ರೆ ಆಯೋಜನೆಗೊಂಡಿದ್ದು, ದಿನಾಂಕ 15 ರಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ. ರೈತರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಹೋರಾಟ ರೂಪಿಸಲಾಗಿದೆ.

*​ಪಾದಯಾತ್ರೆ ಮತ್ತು ವಾಸ್ತವ್ಯದ ವಿವರ:*
​ದಿನಾಂಕ 15: ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಪಾದಯಾತ್ರೆಯ ಮೊದಲ ದಿನದ ವಾಸ್ತವ್ಯ.

​ದಿನಾಂಕ 16: ಎಂ.ಕೆ. ಹುಬ್ಬಳ್ಳಿಯಲ್ಲಿ ರೈತರ ಎರಡನೇ ದಿನದ ವಾಸ್ತವ್ಯ.

​ದಿನಾಂಕ 17: ಐತಿಹಾಸಿಕ ಕಿತ್ತೂರಿನ ಚನ್ನಮ್ಮಾಜಿ ವೃತ್ತದಲ್ಲಿರುವ ರಾಣಿ ಚನ್ನಮ್ಮ ಸ್ಮಾರಕ ಆವರಣದಲ್ಲಿ ವಾಸ್ತವ್ಯ.

*​ಪಕ್ಷಾತೀತ ಬೆಂಬಲಕ್ಕೆ ಬಿಷ್ಟಪ್ಪ ಶಿಂದೆ ಕರೆ:*
ರೈತರ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ರಾಜಕೀಯ ಭೇದ-ಭಾವ ಮರೆತು ಎಲ್ಲ ರೈತರು ಒಗ್ಗಟ್ಟಾಗಿ ನಿಲ್ಲಬೇಕಿದೆ. ಅನ್ನದಾತರ ಹಿತದೃಷ್ಟಿಯಿಂದ ಹಮ್ಮಿಕೊಂಡಿರುವ ಈ ಪಾದಯಾತ್ರೆಯಲ್ಲಿ ಪ್ರತಿಯೊಬ್ಬ ರೈತರೂ ಪಕ್ಷಾತೀತವಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ರೈತ ಹೋರಾಟಗಾರ ಬಿಷ್ಟಪ್ಪ ಶಿಂದೆ ಮನವಿ ಮಾಡಿದ್ದಾರೆ.