Select Page

Advertisement

ಹಳೇ ವೈಷಮ್ಯಕ್ಕೆ ಕೊಲೆ ; ರಾಯಬಾಗ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ

ಹಳೇ ವೈಷಮ್ಯಕ್ಕೆ ಕೊಲೆ ; ರಾಯಬಾಗ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ

ಬೆಳಗಾವಿ : ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವಾಹನ ಡಿಕ್ಕಿ ಹೊಡೆಸಿ ಯುವಕನೋರ್ವನ ಕೊಲೆ ಮಾಡಿದ ಆರೋಪದಲ್ಲಿ ರಾಯಬಾಗ ಠಾಣೆಯ ಪೊಲೀಸರು‌ ಒಟ್ಟು ಎಂಟು ಜನರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಮಹಾರಾಷ್ಟ್ರ ಮೀಜರನ ಅರೀಫ್ ಇಬ್ರಾಹಿಂ ಚೌಧರಿ, ಜುಬೀರ ಚೌಧರಿ, ರಾಜು ಅಲ್ಲಾಭಕ್ಷ ಪಟೇಲ, ಸೋಹೆಲ್ ಪಾತ್ರೋಟ, ಸಂಜಯ ಕಾಂಬಳೆ, ಅಭಿದಾ ಜಮಾದಾರ ಹಾಗೂ ಇಲಿಯಾಸ್ ಶೇಖ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆಯಲ್ಲಿ ಮಿರಜ್ ನ ಸಮೀರ ಖಾಜಾ ಶೇಖ ಸಾವನ್ನಪ್ಪಿದ್ದು, ಪೀರೋಜ್ ಮುಸ್ತಾಕ ರೋಹಿಲೆ ಗಾಯಗೊಂಡಿದ್ದಾನೆ.

ಜ.28 ರಂದು ರಾಯಬಾಗ ಠಾಣೆ ವ್ಯಾಪ್ತಿಯ ಕಂಚಕರವಾಡಿ ಹತ್ತಿರದ ರಾಯಬಾಗ ರಸ್ತೆಯಲ್ಲಿ ವಾಹನಗಳ ಮಧ್ಯೆ ಅಪಘಾತ ಸಂಭವಿಸಿತ್ತು. ಈ ವೇಳೆ ದ್ವಿಚಕ್ರ ವಾಹನದ ಮೇಲೆ ರಾಯಭಾಗದಿಂದ ಹೋಗುತ್ತಿದ್ದ ಸಮೀರ್ ಗೆ ಗಂಭೀರವಾಗಿ ಪೆಟ್ಟು ಬಿದ್ದರಿಂದ ಮೃತಪಟ್ಟಿದ್ದಾನೆ. ಹಾಗೂ ಪೀರೋಜ್ ಗಾಯವಾಗಿವೆ. ಘಟನೆ ನಡೆಯುತ್ತಿದ್ದಂತೆ ವಾಹನ ಚಾಲಕ ಸ್ವಯಂ ಪ್ರೇರಿತವಾಗಿ ರಾಯಬಾಗ ಠಾಣೆಗೆ ಹಾಜರಾಗಿದ್ದಾನೆ ಎಂದು ಮೂಲಗಳು ಖಚಿತಪಡಿಸಿವೆ

ಕೊಲೆ ಕೇಸಲ್ಲಿ ಗಡಿಪಾರಾಗಿದ್ದ ಸಮೀರ್ ?
2017ರಲ್ಲಿ ಮೊದಲ ಆರೋಪಿ ಅರೀಪ್ ಚೌಧರಿ ತಂದೆ ಇಬ್ರಾಹಿಂ ಚೌಧರಿಯನ್ನು ಸಾವಿಗೀಡಾದ ಸಮೀರ್ ಹಾಗೂ ಇತರರು ಸೇರಿಕೊಂಡು ಕೊಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೀರಜನ ಗಾಂಧಿಚೌಕ‌ ಠಾಣೆಯ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಮೊದಲಿಗೆ ಖಾಜಾ ಶೇಖ್ ಹಾಗೂ ‌ಅಮೀರ್ ಶೇಖ್ ಗೆ ಜಾಮೀನು ಸಿಕ್ಕಿತು. ಆದರೆ ಸಮೀರಗೆ ಸ್ಥಳಿಯ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು.

ನಂತರ ಬಾಂಬೆ ನ್ಯಾಯಾಲಯ‌ ಈ ಪ್ರಕರಣದ ವಿಚಾರಣೆ ಮುಗಿಯುವವರೆಗೂ ಆರೋಪಿ ಸಮೀರಗೆ ಮೀರಜ ಮತ್ತು ಸಾಂಗ್ಲಿ ವ್ಯಾಪ್ತಿಯಲ್ಲಿ ವಾಸವಿರದಂತೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತ ರಾಯಬಾಗ ಪಟ್ಟಣದ ವಿದ್ಯಾ ನಗರದಲ್ಲಿ ವಾಸವಾಗಿದ್ದರು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆ ಹಾಜರಾಗುವ ಉದ್ದೇಶದಿಂದ 28-1-2025ರಂದು ದ್ವಿಚಕ್ರ ವಾಹನ ಮೇಲೆ ಸಮೀರ ಹಾಗೂ ಫಿರೋಜ್ ರಾಯಬಾಗ ಪಟ್ಟಣದಿಂದ ತೆರಳುತ್ತಿದ್ದರು. ಈ ವೇಳೆ ನಡೆದ ಅಪಘಾತದಲ್ಲಿ ಸಮೀರ ಸಾವನ್ನಪ್ಪಿದ್ದಾನೆ.

ಕೊಲೆ ಶಂಕೆ ವ್ಯಕ್ತಪಡಿಸಿದ ಖಾಕಿ?:

ವಾಹನ ಅಪಘಾತದಲ್ಲಿ ಸಮೀರ ಸಾವಿನ ಕುರಿತು ಶಂಕೆ ವ್ಯಕ್ತಪಡಿಸಿದ ರಾಯಬಾಗ ಪೋಲೀಸರು ಎಲ್ಲ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿದ್ದಾರೆ. ಮೆಲ್ನೋಟಕ್ಕೆ ಇದು ಅಪಘಾತ ಪ್ರಕರಣವಾಗಿದ್ದರು. ಇದೊಂದು ವ್ಯವಸ್ಥಿತ ಸಂಚು ಇರಬಹುದು ಎಂದು ಮೀರಜನ ಗಾಂಧಿಚೌಕ ಠಾಣೆಯ

ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇದು ಹಳೇ ವೈಷಮ್ಯದ‌ ಹಿನ್ನೆಲೆಯಲ್ಲಿ ವ್ಯವಸ್ತಿತ ಕೊಲೆ ಎಂದು ಮೇಲ್ನೋಟಕ್ಕೆ ಕಂಡುಬಂದ ಹಿನ್ನಲೆ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ‌.
ಈ ಕುರಿತು ರಾಯಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!