BREAKING – ಭೀಕರ ಮಳೆಗೆ ಮನೆ ಕುಸಿದು ಮಗು ಸಾವು ತಾಯಿ ಸ್ಥಿತಿ ಚಿಂತಾಜನಕ
ಯರಗಟ್ಟಿ : ಸವದತ್ತಿ ತಾಲೂಕಿನ ಯರಗಟ್ಟಿ ಸಮೀಪದ ಮಾಡಮ್ಮಗೇರಿ ಗ್ರಾಮದಲ್ಲಿ ಭೀಕರ ಮಳೆಗೆ ಮನೆ ಕುಸಿದು ಮಗು ಸಾವನಪ್ಪಿದ್ದು, ಮಹಿಳೆ ಸ್ಥಿತಿ ಚಿಂತಾಜನಕವಾಗಿದೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭೀಕರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತತವಾಗಿದೆ. ಕಳೆದ ಒಂದು ಗಂಟೆ ಹಿಂದೆ ಸವದತ್ತಿ ಸಮೀಪದ ಮಾಡಮ್ಮಗೇರಿ ಗ್ರಾಮದಲ್ಲಿ ಮನೆ ಕುಸಿದಿದ್ದು ಮಗು ಸಾವನಪ್ಪಿದೆ. ಮನೆಯಲ್ಲಿ ಮೂವರು ಇದ್ದರಿ ಎಂದು ಪ್ರಾಥಮಿಕ ಮಾಹಿತಿ ಬಂದಿದ್ದು, ಮಹಿಳೆ ಸ್ಥಿತಿ ಚಿಂತಾಜನಕವಾಗಿದೆ.
ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ತಹಶಿಲ್ದಾರ ಎಂ.ಎನ್ ಮಠದ್ ಸಿಪಿಐ ಮೌನೇಶ್ವರ ಮಾಲಿ ಪಾಟೀಲ್ ಭೇಟಿ ನೀಡಿದ್ದಾರೆ.