Belagavi : ಭೀಕರ ರಸ್ತೆ ಅಪಘಾತ ಖ್ಯಾತ ವೈದ್ಯನ ಕುಟುಂಬ ಬಲಿ
ಚಿಕ್ಕೋಡಿ : ರಸ್ತೆ ಬದಿ ನಿಂತಿದ್ದ ಕ್ಯಾಂಟರ್‌ಗೆ ಇನ್ನೊವಾ ಕಾರು ಡಿಕ್ಕಿಯಾದ ಪರಿಣಾಮ ತಾಯಿ ಹಾಗೂ ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದ ಘಟನೆ ನಿನ್ನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಖ್ಯಾತ ವೈದ್ಯ ಸಚೀನ್ ಮುರಗೋಡೆ ಇಂದು ಬೆಳಿಗ್ಗೆ ಸಾವನಪ್ಪಿದ್ದಾರೆ.
ಹುಕ್ಕೇರಿ ತಾಲೂಕಿನ ನರಸಿಂಗಪೂರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ರಸ್ತೆ ಬದಿ ನಿಂತಿದ್ದ ಕ್ಯಾಂಟರ್‌ಗೆ ಇನೋವಾ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಸ್ಥಳದಲ್ಲೆ ತಾಯಿ ಹಾಗೂ ಮಗಳು ಸಾವನ್ನಪ್ಪಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಖ್ಯಾತ ವೈದ್ಯ ಸಚೀನ್ ಮುರಗೋಡೆ ಇಂದು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಸಂಕೇಶ್ವರ ಪಟ್ಟಣದ ಖ್ಯಾತ ವೈದ್ಯೆ ಶ್ವೇತಾ ಮುರಗೋಡ(41), ಶಿಯಾ(7), ಹಾಗೂ ಚಿಂತಾಜನಕ ಸ್ಥಿತಿಯಲ್ಲಿದ್ದ ವೈದ್ಯ ಸಚೀನ್ ಮುರಗೋಡೆ ( 43 ) ಸಾವನಪ್ಪಿದ್ದಾರೆ.