ಬೆಳಗಾವಿಯಲ್ಲಿ ಗಮನಸೆಳೆದ ಆರ್‌ಎಸ್‌ಎಸ್ ಪಥಸಂಚಲನ
ಬೆಳಗಾವಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹಾನಗರ ಘಟಕದ ವತಿಯಿಂದ ಕುಂದಾನಗರಿಯಲ್ಲಿ ನಡೆದ ಆಕರ್ಷಕ ಪಥಸಂಚಲನದಲ್ಲಿ ಪುಟಾಣಿ ವೇಷಧಾರಿ ಎಲ್ಲರ ಗಮನ ಸೆಳೆದನು.
ಭಾನುವಾರ ನಗರದಲ್ಲಿ ಆಯೋಜಿಸಿದ್ದ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಜಿಲ್ಲೆಯ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಸುಮಾರು ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಪ್ರತಿವರ್ಷ ಏರ್ಪಡಿಸುತ್ತಿದ್ದ ಪಥಸಂಚಲನವನ್ನು ರದ್ದುಪಡಿಸಲಾಗಿತ್ತು.
ನಗರದ ಲಿಂಗರಾಜ ಕಾಲೇಜು ಆವರಣದಿಂದ ಪ್ರಾರಂಭವಾದ ಪಥಸಂಚಲನ ಕಾಲೇಜು ರಸ್ತೆ, ಗೋಂಧಳಿ ಗಲ್ಲಿ, ಕಂಗ್ರಾಳ ಗಲ್ಲಿ, ಕಾಕತಿವೇಸ್ ರಸ್ತೆ, ಶನಿವಾರ ಕೂಟ, ಗಣಪತ್‌ಗಲ್ಲಿ, ಮಾರುತಿ ಗಲ್ಲಿ, ಅನ್ಸೂರ್‌ಕರ್‌ಗಲ್ಲಿ, ನ್ಯೂಕ್ಲಿಎಸ್ ಮಾಲ್ ರಸ್ತೆ, ಸಂಭಾಜಿ ಸರ್ಕಲ್, ಕಿರ್ಲೋಸ್ಕರ್ ರಸ್ತೆ, ರಾಮದೇವ ಗಲ್ಲಿ, ಖಡೆಬಜಾರ್, ಸಮಾದೇವಿ ಗಲ್ಲಿ ಮುಖಾಂತರ ಲಿಂಗರಾಜ್ ಕಾಲೇಜ್ ಆವರಣದಕ್ಕೆ ಬಂದು ಪಥಸಂಚಲನ ಮುಕ್ತಾಯವಾಯಿತು.