
ಶ್ರೀಮತಿ ಶೋಭಾ ಗಸ್ತಿ ಕಾರ್ಯ ಶ್ಲಾಘನೀಯ : ರೇಖಾ ಚಿನ್ನಾಕಟ್ಟಿ

ಘಟಪ್ರಭಾ : ಸಮಾಜದಲ್ಲಿನ ಶೋಷಿತ ಮಹಿಳೆಯರ ಪರ ಧ್ವನಿ ಎತ್ತುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಿರುವ ನಾರಿ ಶಕ್ತಿ ಪುರಸ್ಕೃತೆ ಶೋಭಾ ಗಸ್ತಿ ಕಾರ್ಯ ಶ್ಲಾಘನೀಯ ಎಂದು, ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಡಾ. ರೇಖಾ ಚಿನ್ನಾಕಟ್ಟಿ ಹೇಳಿದರು.
ಮಹಿಳಾ ದಿನಾಚರಣೆ ಪ್ರಯುಕ್ತ ರಾಷ್ಟ್ರಪತಿಗಳಿಂದ ನಾರಿ ಶಕ್ತಿ ಪ್ರಶಸ್ತಿ ಪಡೆದ ಬೆಳಗಾವಿಯ ಶೋಭಾ ಗಸ್ತಿ ಅವರನ್ನು ಘಟಪ್ರಭಾದ ಕಚೇರಿಯಲ್ಲಿ ಸನ್ಮಾನಿಸಿ ಮಾತನಾಡಿದ ಇವರು.
ನಮ್ಮ ಬೆಳಗಾವಿಯಲ್ಲಿ ಸ್ವಯಂ ಸೇವಾ ಸಂಸ್ಥೆ ಪ್ರಾರಂಭಿಸಿ 3600 ಕ್ಕೂ ಹೆಚ್ಚು ದೇವದಾಸಿಯರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ ಶೋಭಾ ಗಸ್ತಿ ಅವರ ಕಾರ್ಯ ಶ್ಲಾಘನೀಯ. ಮಹಿಳೆಯರು ಸಮಾಜದಲ್ಲಿ ಕಷ್ಟಪಟ್ಟು ಬೆಳೆಯುವುದು ಒಂದು ಭಾಗವಾದರೆ. ಸಂಕಷ್ಟಕ್ಕೆ ಸಿಲುಕಿದ ಮಹಿಳೆಯರ ರಕ್ಷಣೆ ಮಾಡುವುದು ಮತ್ತೊಂದು ಭಾಗ. ಈ ಮಹತ್ವದ ಕಾರ್ಯವನ್ನು ಮಾಡಿರುವ ಇವರಿಗೆ ಧನ್ಯವಾದ ತಿಳಸಿದರು.
ಬಿಜೆಪಿ ಬೆಳಗಾವಿ ಗ್ರಾಮಾಂತರ ಮಹಿಳಾ ಮೋರ್ಚಾ ವಿಭಾಗದ ವತಿಯಿಂದ ಶೋಭಾ ಗಸ್ತಿ ಅವರನ್ನು ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಮಂಜುಳಾ ಹಿರೇಮಠ , ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜ್ಯೋತಿ ಕೋಲಾರ, ಗೋಕಾಕ ನಗರದ ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷರಾದ ರಾಜೇಶ್ವರಿ ಒಡೆಯರ್, ಪದಮಂಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾ ಮಾದರ ,ತೋರಣಗಟ್ಟಿ ಗ್ರಾಪಂ ಸದಸ್ಯರಾದ ಶ್ರೀದೇವಿ ಕಲ್ಲಣ್ಣವರ್, ರೇಣುಕಾ ಹಣಮನ್ನವರ ಸೇರಿದಂತೆ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು