
ತಡರಾತ್ರಿ ಕಾಂಗ್ರೆಸ್ ಅಧ್ಯಕ್ಷರ ಗುಪ್ತ ಸಂಚಾರ – ಕುಂದಾನಗರಿಯಲ್ಲಿ ಮೆಗಾ ಪ್ಲ್ಯಾನ್

ಬೆಳಗಾವಿ : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಚಳಿಗಾಲ ಅಧಿವೇಶನಕ್ಕೆ ಆಗಮಿಸಿರುವ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಡರಾತ್ರಿ ಬೆಳಗಾವಿ ರೌಂಡ್ಸ್ ಮಾಡುತ್ತಿದ್ದಾರೆ. ಇದಕ್ಕೆ ಜಿಲ್ಲಾ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದಾರೆ.
ಹೌದು ಈಗಾಗಲೇ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿಕೊಂಡಿರುವ ಡಿ.ಕೆ ಶಿವಕುಮಾರ್ ಮುಂಬರುವ ಚುನಾವಣೆಯಲ್ಲಿ ಬೆಳಗಾವಿ ರಾಜಕಾರಣದ ಮೇಲೆ ಹಿಡಿತ ಸಾಧಿಸಲು ತಮ್ಮ ಭೇಟೆ ಆರಂಭಿಸಿದ್ದಾರೆ. ಮಧ್ಯ ರಾತ್ರಿ ಗುಪ್ತ ಸಭೆಗಳ ಮೂಲಕ ಮತ್ತೊಂದು ಸುತ್ತಿನ ಅಖಾಡ ಸಿದ್ದಗೊಳಿಸುತ್ತಿದ್ದಾರೆ.
ಇದಕ್ಕೆ ಜಿಲ್ಲಾ ಕಾಂಗ್ರೆಸ್ ಪ್ರಭಾವಿ ಶಾಸಕಿ ಹಾಗೂ ವಿಧಾನ ಪರಿಷತ್ ಸದಸ್ಯ ಸೇರಿದಂತೆ ಮುಂಬರುವ ಚುನಾವಣೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ತಂಡ ತಂತ್ರ ಹೆಣೆಯುತ್ತಿದೆ. ಬೆಳಗಾವಿಯಂತಹ ಹೈ ಒಲ್ಟೆಜ್ ಕ್ಷೇತ್ರದಲ್ಲಿ ಕನಕಪುರ ಬಂಡೆ ಯಾವೆಲ್ಲ ದಾಳ ಉರುಳಿಸಲು ಸಜ್ಜಾಗಿದೆ ಎಂಬುದು ಮುಂಬರುವ ದಿನಗಳಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ.