Select Page

Advertisement

ಭೀಕರ ರಸ್ತೆ ಅಪಘಾತ ; ಇಬ್ಬರು ಸ್ಥಳದಲ್ಲೇ ಸಾವು

ಭೀಕರ ರಸ್ತೆ ಅಪಘಾತ ; ಇಬ್ಬರು ಸ್ಥಳದಲ್ಲೇ ಸಾವು

ಉಗರಗೋಳ: ಸಮೀಪದ ಹಿರೇಕುಂಬಿ ಬಳಿ ಶುಕ್ರವಾರ ಸಂಜೆ ಎರಡು ಬೈಕ್ ಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸವಾರರು ಸ್ಥಳದಲ್ಲೇ‌‌ ಮೃತಪಟ್ಟಿದ್ದಾರೆ.

ಸವದತ್ತಿಯ ಬಸವರಾಜ ಪ್ರಭುನವರ(48), ಹಂಚಿನಾಳದ ನಿವಾಸಿ ಯಲ್ಲಪ್ಪ ಕೊರವಿನಕೊಪ್ಪ(46) ಮೃತರು.

ಈ ಘಟನೆಯಲ್ಲಿ ಗಾಯಗೊಂಡ ಇಬ್ಬರು ಹಿಂಬದಿ ಸವಾರರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಪಾಂಡುರಂಗಯ್ಯ,
ಸವದತ್ತಿ ಸಿಪಿಐ ಡಿ.ಎಸ್.ಧರ್ಮಟ್ಟಿ ಭೇಟಿ ನೀಡಿ ಪರಿಶೀಲಿಸಿದರು‌. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!