
ಅಂದು ಹುಲಿ ಇಂದು ಸಿಂಹ ಸಾವು ; ಏನಾಗ್ತಿದೆ ಭೂತರಾಮನಹಟ್ಟಿ ಮೃಗಾಲಯದಲ್ಲಿ….?

ಬೆಳಗಾವಿ : ಸಾವಿರಾರು ಪ್ರಾಣಿ ಪ್ರಿಯರ ಆಕರ್ಷಣೆಯಾಗಿದ್ದ ಭೂತರಾಮನಹಟ್ಟಿ ಕಿರು ಮೃಗಾಲಯದಲ್ಲಿದ್ದ 15 ವರ್ಷದ ಹೆಣ್ಣು ಸಿಂಹ ಮೃತಪಟ್ಟಿದೆ. ಹುಲಿ ಸಾವು ಮರೆಯುವ ಮುನ್ನವೇ ಈಗ ಮತ್ತೊಂದು ಪ್ರಾಣಿ ಸಾವಣಪ್ಪಿದೆ.
ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ಕಿತ್ತೂರು ರಾಣಿ ಚನ್ನಮ್ಮ ಕಿರುಮೃಗಾಲಯದಲ್ಲಿ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೆಣ್ಣು ಸಿಂಹ ಮೃತಪಟ್ಟಿದೆ ಎಂಬ ಆರೋಪ ಕೇಳಿಬಂದಿದೆ.
ನಿರುಪಮಾ ಹೆಸರಿನ 15 ವರ್ಷದ ಈ ಹೆಣ್ಣು ಸಿಂಹ ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಸಧ್ಯ ಮೃತಪಟ್ಟಿದೆ. ಪದೇ, ಪದೇ ಈ ರೀತಿಯಲ್ಲಿ ಹುಲಿ ಮತ್ತು ಸಿಂಹ ಸಾವಿಗೆ ಏನು ಕಾರಣ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ.
ಸಾಮಾನ್ಯವಾಗಿ ಬಿಸಿಲಿನ ತಾಪಮಾನ ಸೇರಿದಂತೆ ಭೂತರಾಮನಹಟ್ಟಿ ಪರಿಸರ ಹುಲಿ ಹಾಗೂ ಸಿಂಹದಂತ ದೈತ್ಯ ಪ್ರಾಣಿಗಳ ವಾಸಸ್ಥಾನಕ್ಕೆ ಯೋಗ್ಯವಲ್ಲವಾ ಅಥವಾ ಪ್ರಾಣಿಗಳನ್ನು ಆರೈಕೆ ಮಾಡುವುದರ ವಿಫಲತೆಯಾ ಎಂಬುದು ಈವರೆಗೂ ಜನರಿಗೆ ತಿಳಿಯುತ್ತಿಲ್ಲ.