ಪಿಎಸ್ಐ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದು 50 ಮಹಿಳೆಯರಿಗೆ ವಂಚಿಸಿದ್ದ ಅಥಣಿ ಮೂಲದ ಆರೋಪಿ ಬಂಧನ
ಬೆಳಗಾವಿ : ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಅನೀಲಕುಮಾರ ಕುಂಬಾರ ಅವರ ಹೆಸರಿನಿಂದ ನಕಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದು 50 ಕ್ಕೂ ಅಧಿಕ ಮಹಿಳೆಯರಿಗೆ ವಂಚಿಸಿ ಲಕ್ಷಾಂತರ ರೂ. ಹಣ ಪಡೆದಿದ್ದ ಅಥಣಿ ಮೂಲದ ಆರೋಪಿಯನ್ನು ಬಂಧಿಸುವಲ್ಲಿ
ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ತಂಡ ಯಶಸ್ವಿಯಾಗಿದೆ.
ನವೆಂಬರ್ 2022 ರಂದು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಅನೀಲಕುಮಾರ ಕುಂಬಾರ, ತಮ್ಮ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದು ಪೋಟೊಗಳನ್ನು ದುರುಪಯೋಗ ಮಾಡಿಕೊಂಡಿರುವುದಾಗಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇನ್ನೂ ಈ ಪ್ರಕರಣ ಬೆನ್ನಟ್ಟಿದ ಸಿಇಎನ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ಬಿ ಆರ್ ಗಡ್ಡೇಕರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಅಥಣಿ ಮೂಲದ ವಿಜಯ್ ಬರಲಿ ( 28 ) ಯುವಕ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾನೆ. ಪ್ರಕರಣ ಕುರಿತಾಗಿ ವಿಚಾರಣೆ ನಡೆಸಿದಾಗ ಆರೋಪಿ 50 ಕ್ಕೂ ಅಧಿಕ ಮಹಿಳೆಯರಿಗೆ ವಂಚಿಸಿ ಉದ್ಯೋಗ ಹಾಗೂ ಇನ್ನಿತರ ಕಮಿಷ ಒಡ್ಡಿ ಸುಮಾರು 4 ಲಕ್ಷಕ್ಕೂ ಅಧಿಕ ಹಣ ಫಂಗನಾಮ ಹಾಕಿರುವುದು ಬೆಳಕಿಗೆ ಬಂದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಇನ್ನೂ ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಸಿಇಎನ್ ಠಾಣೆಯ ಅಧಿಕಾರಿಗಳಾದ ಪಿಎಸ್ಐ ಹೆಚ್ ಎಲ್ ಧರ್ಮಟ್ಟಿ, ಎಎಸ್ಐ ಹೆಚ್ ಭಜಂತ್ರಿ, ಕೆ ಆರ್ ಇಮಾಮನವರ, ಎಸ್ ಲಮಾಣಿ, ಸ್ ಐ ಭಂಡಿ, ಎನ್ ಆರ್ ಘಡೆಪ್ಪನವರ,ಈರಣ್ಣ ನಡುವಿನಹಳ್ಳಿ, ಸಿ ಎ ಕೆಳಗಡೆ ಭಾಗಿಯಾಗಿದ್ದರು.