ಇಟ್ಕೊಂಡವನ ಜೊತೆ ಹೆಂಡ್ತಿ ಪರಾರಿ ; ಮೋದಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ ಪತಿ
ತುಮಕೂರು : ಕಟ್ಕೊಂಡ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಪರ ಪುರುಷನೊಂದಿಗೆ ಮಹಿಳೆಯೊಬ್ಬಳು ಓಡಿ ಹೋದ ಪರಿಣಾಮ ಮರ್ಯಾದೆಗೆ ಹೆದರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಹೊಸಹಳ್ಳಿ ಗ್ರಾಮದ ದೇವರಾಜ್ ( 35 ) ಮೃತಪಟ್ಟ ವ್ಯಕ್ತಿ. ಇತನ ಪತ್ನಿ ಮಾಧವಿ ಜೊತೆ ಕಳೆದ 18 ವರ್ಷಗಳ ಹಿಂದೆ ಮದುವೆ ಆಗಿತ್ತು. ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಮಧ್ಯೆ ಮತ್ತೊಬ್ಬ ಬಂದ ಪರಿಣಾಮ ಸುಂದರ ಕುಟುಂಬ ಒಡೆದು ಹೋಗಿದೆ.
ಹೆಂಡತಿ ಓಡಿ ಹೋಗಿರುವ ಸುದ್ದಿ ತಿಳಿಯುತ್ತಿದ್ದಂತೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ ಬರೆದಿಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಕುಮಾರಸ್ವಾಮಿ, ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ನನ್ನ ಸಾವಿಗೆ ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದಾನೆ.
ಮೃತ ವ್ಯಕ್ತಿ ಬರೆದ ಡೆತ್ ನೋಟ್ ನಲ್ಲಿ ಪತ್ನಿ ಮಾಧವಿ ಹಾಗೂ ಆನಂದ ಕುಮಾರ್ ನ ಆಟವನ್ನು ಬರೆದಿದ್ದಾರೆ. ತನ್ನ ಹೆಂಡತಿಗೆ ಕಾಳು ಹಾಕಿ ಆರೋಪಿ ಬಲೆಗೆ ಬೀಳಿಸಿಕೊಂಡಿದ್ದು ಕೊಲೆ ಆರೋಪವನ್ನು ಮಾಡಿದ್ದ ಎಂದು ಬರೆದುಕೊಂಡಿದ್ದಾರೆ.
ತುಮಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರು ಆರೋಪಿಗಳ ಮೇಲೆ ಆತ್ಮಹತ್ಯೆ ಪ್ರಚೋದನೆಗೆ ಆರೋಪದ ಕುರಿತು ಪ್ರಕರ ದಾಖಲಾಗಿದೆ.