ಬಳ್ಳಾರಿ : ತಮ್ಮನ‌ ನಿಧನದ ಸುದ್ದಿ ಕೇಳುತ್ತಿದ್ದಂತೆ ಅಕ್ಕ ಹೃದಯಾಘಾತದಿಂದ ಸಾವಣಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲೂಕಿನ ಕರೂರು ಗ್ರಾಮದ‌ ಮಲ್ಲಯ್ಯ ( 54 ) ಮೃತ ವ್ಯಕ್ತಿ. ಹೃದಯಾಘಾತದಿಂದ ನಿನ್ನೆ ರಾತ್ರಿ ಮೃತಪಟ್ಟಿದ್ದರು. ಮೃತ ಮಲ್ಲಯ್ಯನ ಸಾವಿನ ವಿಷಯ ಇಂದು ಬೆಳಿಗ್ಗೆ ಸಹೋದರಿಗೆ ತಿಳಿಸಲಾಗಿತ್ತು.

ತಮ್ಮನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಹೋದರಿ ಮಲ್ಲಮ್ಮ‌ (58) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು.

ಮೃತ ಮಲ್ಲಮ್ಮ ಅವರು ಮೂವರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಬಿಟ್ಟು ಅಗಲಿದ್ದರೆ, ಮಲ್ಲಯ್ಯ ಅವರು ಪತ್ನಿ ಮೂವರು ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.