ಗೋವಾ ಸಂಚಾರ ಮಾರ್ಗದಲ್ಲಿ ಬದಲಾವಣೆ ; ವಾಹನ ಸವಾರರಿಗೆ ಡಿಸಿಪಿ ಸೂಚನೆ
ಬೆಳಗಾವಿ : ಬೆಳಗಾವಿಯಿಂದ ಗೋವಾ ತೆರಳುವ ಜಾಂಬೋಟಿ – ಚೋರ್ಲಾ ಮಾರ್ಗದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಭಾರಿ ಗ್ರಾತ್ರದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಬೆಳಗಾವಿ ನಗರ ಉಪ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಂಬೋಟಿ ಹಾಗೂ ಚೋರ್ಲಾ ಪ್ರದೇಶ ವ್ಯಾಪ್ತಿಗಳಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ವಾಹನಗಳ ಸಂಚಾರದಲ್ಲಿ ಅಲ್ಲಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸೇತುವೆಗಳು ಶಿಥಿಲಗೊಂಡಿದ್ದು ಹಿನ್ನೆಲೆಯಲ್ಲಿ.
ಬೆಳಗಾವಿ ನಗರದಿಂದ ಜಾಂಬೋಟಿ ಚೋರ್ಲಾ ಮಾರ್ಗವಾಗಿ ಗೋವಾ ಕಡೆಗೆ ಸಂಚರಿಸುವ ಎಲ್ಲಾ ಭಾರಿ ವಾಹನಗಳು ಪೀರನವಾಡಿ ಕ್ರಾಸ್ ಹತ್ತಿರ ಎಡ ತಿರುವು ಪಡೆದುಕೊಂಡು ಖಾನಾಪುರ ಮಾರ್ಗವಾಗಿ ಮುಂದೆ ಸಂಚರಿಸುವಂತೆ ಡಿಸಿಪಿ ಸ್ನೇಹ ಪಿ.ವಿ ಸೂಚನೆ ನೀಡಿದ್ದಾರೆ.