
ಮಳೆ ಅವಾಂತರ ; ಗೋಕಾಕ್ – ಶಿಂಗಳಾಪೂರ ಬ್ರಿಡ್ಜ್ ಮುಳುಗಡೆ

ಗೋಕಾಕ್ : ಘಟಪ್ರಭಾ-ಮಾರ್ಕಂಡೇಯ ನದಿಯ ನೀರಿನ ಮಟ್ಟ ಹೆಚ್ಚಳ ಹಿನ್ನಲೆ ಗೋಕಾಕ ಮತ್ತು ಶಿಂಗಳಾಪೂರ ನಡುವಿನ ಬ್ರೀಡ್ಜ್ ಕಂ ಬ್ಯಾರೇಜ್ ಸೇತುವೆ ಮುಳಗಡೆಯ ಹಂತದಲ್ಲಿದೆ.
ಗೋಕಾಕ ಶಿಂಗಳಾಪೂರ ಸಂಪರ್ಕಕ್ಕೆ ಮತ್ತೊಂದು ಸೇತುವೆ ಇದ್ದರು ಸಹ ಬೈಕ್ ಸವಾರರು ಸೇತುವೆ ದಾಟಲು ಹರಸಾಹಸ ಪಡುತ್ತಿದ್ದಾರೆ. ಈ ಕುರಿತು ತಾಲೂಕಾಡಳಿತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.
ಸ್ಥಳಕ್ಕೆ ಗೋಕಾಕ್ ತಹಶಿಲ್ದಾರ ಮೋಹನ ಭಸ್ಮೆ ಸ್ಥಳಕ್ಕೆ ಭೇಟಿ ನೀಡಿ ಬ್ರಿಡ್ಜ್ ಬಳಿ ವಾಹನ ಸಂಚಾರ ನಡೆಸದಂತೆ ಬಂದೋಬಸ್ತ್ ಕಲ್ಪಿಸುವಂತೆ ಸೂಚನೆ ನೀಡಿದರು.