
ಭಾರತ ನಕ್ಷೆ ಅವಮಾನಿಸಿದ ಕಾಂಗ್ರೆಸ್ ; ಬ್ಯಾನರ್ ಅವಾಂತರ

ಬೆಳಗಾವಿ : ಗಾಂಧಿ ಅಧಿವೇಶನ ಶತಮಾನೋತ್ಸವ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ಭಾರತದ ನಕ್ಷೆಗೆ ಅವಮಾನ ಮಾಡಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸ್ವಾಗತಕ್ಕೆ ಹಾಕಲಾಗಿದ್ದ ಬ್ಯಾನರ್ ನಲ್ಲಿ ಭಾರತದ ಭೂಪಟ ಜಮ್ಮು ಕಾಶ್ಮೀರ ಭಾಗವನ್ನು ಅರ್ಧ ಹಾರಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ಭಾಗವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಭಾರತೀಯರು ನಿರಂತರ ಆಗ್ರಹ ಮಾಡುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ನಕ್ಷೆಗೆ ಅವಮಾನ ಆಗಿರುವುದನ್ನು ಬಿಜೆಪಿ ಬಲವಾಗಿ ಖಂಡಿಸಿದೆ.