
ಜೂನ್ 6 ರಂದು ಕಾರಂಜಿ ಮಠದಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ

ಬೆಳಗಾವಿ : 252 ನೇ ಶಿವಾನುಭವ ನಿಮಿತ್ತ ನಗರದ ಕಾರಂಜಿ ಮಠದಲ್ಲಿ ಬರುವ ಜೂನ್ 6 ಅಥಣಿ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜೂನ್ 6. ರಂದು ಸಾಯಂಕಾಲ 252 ನೇ ಶಿವಾನುಭವ ನಿಮಿತ್ಯ ಅಥಣಿ ಮುರುಘೇoದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮ ಜರುಗಲಿದ್ದು ಶ್ರೀಮಠದ ಗುರುಸಿದ್ಧ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಥಣಿ ಶಿವಯೋಗಿಗಳ ಕುರಿತು ಬೆಳಗಾವಿಯ ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಉಪನ್ಯಾಸ ನೀಡಲಿದ್ದಾರೆ.

ಪ್ರಸ್ತುತ ವರ್ಷದ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ 250 ನೇ ಸ್ಥಾನ ಪಡೆದ ಸಾಹಿತ್ಯಾ ಮಲ್ಲಿಕಾರ್ಜುನ ಆಲದಕಟ್ಟಿ, ಸರ್ವಲೋಕ ಸೇವಾ ಫೌಂಡೇಶನ್ ಸಂಸ್ಥಾಪಕ ವಿರೇಶ ಬಸಯ್ಯಾ ಹಿರೇಮಠ ಹಾಗೂ ಸುರೇಶ ಯಾದವ ಫೌಂಡೇಶನ್ ಸಂಸ್ಥಾಪಕ, ಸಮಾಜ ಸೇವಕ ಸುರೇಶ ಯಾದವ ಅವರನ್ನು ಸತ್ಕಾರಿಸಲಾಗುವುದು ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದೆ.