ಹನುಮಂತ ಹುಕ್ಕೇರಿ ಸೇರಿ ಬೆಳಗಾವಿಯ ಐವರಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು : ರಾಜ್ಯ ಸರ್ಕಾರದಿಂದ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಈ ಬಾರಿ ಕುಂದಾನಗರಿಯ ಐವರು ಸಾಧಕರಿಗೆ ಲಭಿಸಿದ್ದು, ಶಿಲ್ಪಕಲಾ ವಿಭಾಗದಲ್ಲಿ ಸೇವೆ ಸಲ್ಲಿಸಿದ ಹನುಮಂತ ಹುಕ್ಕೇರಿ ಸೇರಿ ಐವರಿಗೆ ಪ್ರಶಸ್ತಿ ದೊರಕಿದೆ.
ಸಾಹಿತ್ಯ ಕ್ಷೇತ್ರದಲ್ಲಿ ರಾಮಕೃಷ್ಣ ಮರಾಠೆ, ಶಂಕರ ಚಚಡಿ, ಅಶೋಕ ಬಾಬು ನೀಲಗಾರ, ಕ್ರೀಡಾ ಕ್ಷೇತ್ರದಲ್ಲಿ ರಾಘವೇಂದ್ರ ಅಣ್ವೇಕರ್ ಪ್ರಶಸ್ತಿ ಲಭಿಸಿದೆ.