ಯರಗಟ್ಟಿ : ಮನೆ ಕುಸಿದು ತಾಯಿ ಮಗು ಸಾವು – ಇಬ್ಬರ ಸ್ಥಿತಿ ಚಿಂತಾಜನಕ
ಯರಗಟ್ಟಿ: ಸಮೀಪದ ಮಾಡಮಗೇರಿ ಗ್ರಾಮದಲ್ಲಿ ಭಾರಿ ಮಳೆಗೆ ಮಹಾದೇವ ಲಕ್ಷ್ಮಪ್ಪ ಬಾಗಿಲದ ಇವರಿಗೆ ಸೇರಿದ ಮನೆ ಕುಸಿದು ಪ್ರಜ್ವಲ್(5) ಮಗು ಹಾಗೂ ತಾಯಿ ಯಲ್ಲವ್ವ ಮಹಾದೇವ ಬಾಗಿಲದ(40) ಸಾವನಪ್ಪಿದ ಘಟನೆ ನಡೆದಿದೆ.
ಸ್ಥಳಕ್ಕೆ ತಹಶೀಲ್ದಾರ ಮಹಾಂತೇಶ ಮಠದ, ಸಿಪಿಐ ಮೌನೇಶ್ವರ ಮಾಲಿಪಾಟೀಲ, ಪಿಎಸ್ಐ ಬಸನಗೌಡ ನಿರ್ಲಿ,ಎಎಸ್ಐ ವಾಯ್ ಎಂ. ಕಡಕೋಳ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ಈ ಕುರಿತು ಮುರಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.