ಹಬ್ಬದ ದಿನವೇ ಕೊಳದಲ್ಲಿ ತಾಯಿ, ಮಗನ ಶವ ಪತ್ತೆ
ಬೆಳಗಾವಿ : ದೀಪಾವಳಿ ಹಬ್ಬದ ದಿನವೇ ಬೆಳಗಾವಿಯ ಗಣಪತಿ ಕೊಳದಲ್ಲಿ ತಾಯಿ, ಮಗನ ಶವ ಪತ್ತೆಯಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಬೆಳಗಾವಿಯ ಹಿಂಡಲಗಾ ಗಣಪತಿ ದೇವಸ್ಥಾನದ ಮುಂಭಾಗ ಇರುವ ಗಣಪತಿ ಕೊಳದಲ್ಲಿ ಕವಿತಾ ಬಸವಂತ ಜುನೇಬೆಳಗಾಂವಕರ್ ಹಾಗೂ ಸಮರ್ಥ ಎಂಬುವವರ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಕ್ಯಾಂಪ್ ಪೊಲೀಸರ ಭೇಟಿ ನೀಡಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.