VIDEO : ದಿ. ಉಮೇಶ್ ಕತ್ತಿಗೆ ತವರು ಜನರಿಂದ ದೀಪ ನಮನ
ಹುಕ್ಕೇರಿ : ಹೃದಯಾಘಾತದಿಂದ ನಿಧನರಾದ ಸಚಿವ ದಿ. ಉಮೇಶ್ ಕತ್ತಿ ನಿಧನದ ಹಿನ್ನಲೆ ಅವರ ಸ್ವ ಗ್ರಾಮ ಬೆಲ್ಲದ ಬಾಗೇವಾಡಿಯಲ್ಲಿ ಅಭಿಮಾನಿಗಳಿಂದ ದೀಪ ನಮನ ಸಲ್ಲಿಸಲಾಯಿತು.
ತಮ್ಮ ಅಚ್ಚುಮೆಚ್ಚಿನ ರಾಜಕೀಯ ನಾಯಕನ ಅಗಲಿಕೆಯಿಂದ ನೊಂದ ಬೆಲ್ಲದ ಬಾಗೇವಾಡಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಆಗಮಿಸಿ ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಕಳೆದ ನಾಲ್ಕು ದಶಕಗಳ ಸುಧೀರ್ಘ ರಾಜಕಾರಣದಲ್ಲಿದ್ದ ದಿ. ಉಮೇಶ್ ಕತ್ತಿ ಅವರು ಕ್ಷೇತ್ರದ ಮತದಾರರು ಹಾಗೂ ಜಿಲ್ಲೆಯ ಜನರ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದರು. ಈ ಕಾರಣಕ್ಕಾಗಿ ಅವರ ಅಗಲಿಕೆಯಿಂದ ಜನ ಕಣ್ಣೀರು ಹಾಕುತಿದ್ದಾರೆ.
ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ ಮನೆಗೆ ಅನೇಕ ರಾಜಕೀಯ ಮುಖಂಡರು ಹಾಗೂ ಸಾವಿರಾರು ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಹೋದರನನ್ನು ನೆನೆದು ಮಾಜಿ ಸಂಸದ ರಮೇಶ್ ಕತ್ತಿ ಕಣ್ಣೀರು ಹಾಕುತ್ತಿರುವ ದೃಶ್ಯ ಎಂತವರ ಮನ ಕಲಕಿಸುವಂತಿದೆ. ಅಷ್ಟೇ ಅಲ್ಲದೆ ಆ ನೋವನ್ನು ಅವರು ಕಾರ್ಯಕರ್ತರ ಮುಂದೆ ಹೊರ ಹಾಕುತ್ತಿದ್ದಾರೆ.