ರಕ್ಷಣೆಗಾಗಿ ಪೊಲೀಸರ ಬಳಿ ಹಾರಿ ಬಂದ ಪ್ರೇಮ ಹಕ್ಕಿಗಳು
ಬೆಳಗಾವಿ : ನವ ವಿವಾಹಿತರಿಗೆ ಯುವತಿ ಮನೆಯವರು ಕಿರುಕುಳ ನೀಡುತ್ತಿದ್ದು, ನಮಗೆ ರಕ್ಷಣೆ ನೀಡುವಂತೆ ಬೆಳಗಾವಿ ಎಸ್ಪಿ ಕಚೇರಿಗೆ ಪ್ರೇಮಿಗಳು ರಕ್ಷಣೆ ಕೋರಿ ಬಂದಿದ್ದಾರೆ.
ರಾಯಬಾಗ ತಾಲೂಕಿನ ಮಗಳಖೋಡದ ಕಳೆದ ಎರಡೂ ವರ್ಷಗಳಿಂದ ಕೃಷಿ ಕೆಲಸ ಮಾಡುತ್ತಿದ್ದ ಹುಡುಗನೊಂದಿಗೆ ಮನೆಯಲ್ಲಿ ಟೆಲರಿಂಗ್ ಕೆಲಸ ಮಾಡುತ್ತಿದ್ದ ಯುವತಿ ನಡುವೆ ಪ್ರೇಮವಾಗಿದೆ. ಒಬ್ಬರಿಗೊಬ್ಬರು ಇಷ್ಟ ಪಟ್ಟು ಜನವರಿ 18 ಬೆಳಗಾವಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದಾರೆ.
ಮದುವೆಗೆ ವಿರೋಧ ವ್ಯಕ್ತಪಡಿಸಿದ ಯುವತಿಯ ಕುಟುಂಬದವರು ಯುವಕನ ಮೇಲೆನ ಹಾಗೂ ಯುವಕನ ಕುಟುಂಬದರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಇದಕ್ಕೆ ಹೆದರಿದ ಪ್ರೇಮಿಗಳಿಬ್ಬರು ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರ ಬಳಿ ರಕ್ಷಣೆ ಕೋರಿ ಬಂದಿದ್ದಾರೆ.