ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ; ದುರಂತ ಅಂತ್ಯಕ್ಕೆ ಕಾರಣ ಏನು..?
ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಹಾಗೂ ನಟ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದು, ಕೊಳೆತ ಸ್ಥಿತಿಯಲ್ಲಿ ಮೃಯದೇಹ ಪತ್ತೆಯಾಗಿದೆ.
ಮಠ, ಎದ್ದೇಳು ಮಂಜುನಾಥ ಸೇರಿದಂತೆ ಮುಂತಾದ ಹಿಟ್ ಚಿತ್ರಗಳ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದ ನಟ ಗುರುಪ್ರಸಾದ್ ( Guruprasad ) ಆತ್ಮಹತ್ಯೆ ಹಲವು ಅನುಮಾನ ಹುಟ್ಟುಹಾಕಿದೆ. ನಗರದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇತ್ತೀಚಿನ ಕೆಲ ದಿನಗಳಿಂದ ಸಾಲಗಾರರ ಕಾಟಕ್ಕೆ ಬೇಸತ್ತಿದ್ದ ಗುರುಪ್ರಸಾದ್ ತುಂಬಾ ನೊಂದಿದ್ದರು ಎಂದು ಹೇಳಲಾಗುತ್ತಿದೆ. ನಗರದ ಹೊರವಲಯದಲ್ಲಿ ಪ್ಲಾಟ್ ಒಂದನ್ನು ಖರೀದಿಸಿ ಅಲ್ಲಿಯೇ ವಾಸವಾಗಿದ್ದು. ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ನಟ ಗುರುಪ್ರಸಾದ್ ಸಾಲದ ಸುಳಿಯಲ್ಲಿ ಸಿಲುಕಿದ್ದರಾ ಎಂಬ ಅನುಮಾನ ಮೂಡಿಸಿದೆ.
ಕನಕಪುರದಲ್ಲಿ ಜನಿಸಿದ್ದ ನಟ ಗುರುಪ್ರಸಾದ್ ಟಿ.ಎನ್ ಸೀತಾರಾಂ ಅವರ ಗರಡಿಯಲ್ಲಿ ಬೆಳೆದವರು. ಮಠ ಚಲನಚಿತ್ರ ಮೂಲಕ ಹೆಸರು ಮಾಡಿದ್ದ ಇವರು ಕೆಲವು ವಿವಾದಗಳು ತಳಕುಹಾಕಿಕೊಂಡಿದ್ದವು.