Select Page

ಮುಖವಾಡದ ಬದುಕು ಇಷ್ಟವಿಲ್ಲ ; ಬಿಗ್ ಬಾಸ್ ಮನೆಯಿಂದ ಹೊರ ಹೋಗುವೆ ಎಂದ ವರ್ತೂರ್ ಸಂತೋಷ್

ಮುಖವಾಡದ ಬದುಕು ಇಷ್ಟವಿಲ್ಲ ; ಬಿಗ್ ಬಾಸ್ ಮನೆಯಿಂದ ಹೊರ ಹೋಗುವೆ ಎಂದ ವರ್ತೂರ್ ಸಂತೋಷ್

ಬೆಂಗಳೂರು : ಈ ಬಾರಿಯ ಬಿಗ್ ಬಾಸ್ ಕನ್ನಡ ಹಲವು ವಿಶೇಷಗಳಿಗೆ ಸಾಕ್ಷಿ ಆಗುತ್ತಿದೆ. ಬೇಡದ ವಿಷಯಗಳಿಗೂ ಸುದ್ದಿ ಆಗುತ್ತಿರುವ ಕನ್ನಡದ ಶೋ ನಲ್ಲಿ ಮತ್ತೊಂದು ಅವಾಂತರ ಸೃಷ್ಟಿಯಾಗಿದೆ.

ಹಳ್ಳಿಕಾರ್ ತಳಿ ಗೋವುಗಳ ಕುರಿತು ಆಸಕ್ತಿ ಹೊಂದಿದ್ದ ವರ್ತೂರ್ ಸಂತೋಷ್ ಅವರು ಈ ಬಾರಿ ರೈತರ ಪರವಾಗಿ ಬಿಗ್ ಬಾಸ್ ಕನ್ನಡಕ್ಕೆ ಆಗಮಿಸಿದ್ದರು. ಆದರೆ ಸಧ್ಯ ನಾಲ್ಕನೇ ವಾರಕ್ಕೆ ಮನೆಗೆ ವಾಪಸ್ ಕಳಿಸಿ ಎಂದು ಹೇಳುವ ಮೂಲಕ ನಿರೂಪಕ ಸುದೀಪ್ ಸೇರಿ ಅನೇಕರಿಗೆ ಅಚ್ಚರಿ ಮೂಡಿಸಿದ್ದಾರೆ‌.

ಹಲಿ ಉಗುರು ಪೆಂಡೆಂಟ್ ಧರಿಸಿದ್ದಾರೆ ಎಂಬ ಕಾರಣಕ್ಕೆ ವರ್ತೂರ್ ಸಂತೋಷ್ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಇವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಸಧ್ಯ ಈ ಪ್ರಕರಣ ರಾಜ್ಯಾಧ್ಯಂತ ದೊಡ್ಡ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.

ಕೇವಲ ಸಂತೋಷ್ ಅವರ ಉಲಿ ಉಗುರು ಪ್ರಕರಣ ರಾಜ್ಯದ ರಾಜಕೀಯ ವಲಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು. ಅನೇಕ ಶಾಸಕರು, ಸಚಿವರು ಸೇರಿ ಹಲವರ ಕೊರಳಿಗೂ ಹುಲಿ ಉಗುರು ವಿವಾದ ಸುತ್ತಿಕೊಂಡಿತ್ತು. ಆದರೆ ವಿವಾದದ ಮೂಲವಾಗಿದ್ದ ವರ್ತೂರ್ ಸಂತೋಷ್ ಮತ್ತೆ ಸುದ್ದಿಯಾಗುತ್ತಿದ್ದಾರೆ.

ಕಳೆದ ವಾರ ಉಂಟಾದ ಬೆಳವಣಿಗೆ ಹಾಗೂ ಮನೆಯ ಜನರ ಮನಸ್ಥಿತಿ ಸೇರಿದಂತೆ ವರ್ತೂರ್ ಸಂತೋಷ್ ಅವರು ಬಿಗ್ ಬಾಸ್ ಮನೆ ತೊರೆಯುವ ನಿರ್ಧಾರ ಮಾಡಿದ್ದಾರೆ. ನಾನು ನೇರವಾಗಿ ಬದುಕಿ ಜೀವನ ನಡೆಸಿದವನು ಇಲ್ಲಿನ ಮುಖವಾಡದ ಬದುಕು ಇಷ್ಟವಿಲ್ಲ. ದಯವಿಟ್ಟು ಹೊರಗೆ ಕಳುಹಿಸಿ ಎಂದು ಬೇಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಈ ಬಾರಿಯ ಬಿಗ್ ಬಾಸ್ ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿ ಮಾಡುತ್ತಿದೆ. ನೇರವಾಗಿ ಬದುಕು ನಡೆಸಿದ ಜನರಿಗೆ ಸಧ್ಯ ಬಿಗ್ ಬಾಸ್ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಹಾಗೆಯೇ ವರ್ತೂರ್ ಸಂತೋಷ್ ಅವರ ನಿರ್ಧಾರಕ್ಕೆ ಬಿಗ್ ಬಾಸ್ ಅವಕಾಶ ಕೊಡುತ್ತದೆಯಾ ಎಂದು ಕಾದು ನೋಡಬೇಕು.

Advertisement

Leave a reply

Your email address will not be published. Required fields are marked *

error: Content is protected !!