
ಅಯ್ಯೋ ಅಪ್ಪು : ಆಟ ನಿಲ್ಲಿಸಿದ ಪರಮಾತ್ಮ

ಬೆಂಗಳೂರು : ಖ್ಯಾತ ನಟ ಹಾಗೂ ಡಾ. ರಾಜ್ ಕುಟುಂಬದ ಕುಡಿ ಪುನಿತ್ ರಾಜಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಲಾಗಿದೆ.

ಇಂದು ಬೆಳಗಿನ ಜಾವ ಜಿಮ್ ನಲ್ಲಿ ವ್ಯಾಯಾಮ ಮಾಡುವ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ನಿಧನರಾಗಿದ್ದಾರೆ ಎಂದು ಹೇಳಲು ವಿಷಾದವೆನಿಸುತ್ತಿದೆ.