VIDEO-ಪುನೀತ್ ಅಭಿಮಾನಿ ಸಂಕಟ ನೋಡಿ ಕಣ್ಣೀರಿಟ್ಟ ಜನರು
ಬೆಳಗಾವಿ : ಪುನೀತ್ ರಾಜಕುಮಾರ್ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಲು ಆಗಮಿಸಿದ್ದ ಅಭಿಮಾನಿಯೊಬ್ಬ ನಗರದ ಚನ್ನಮ್ಮ ವೃತ್ತದಲ್ಲಿ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ವ್ಯಕ್ತಿಯ ಸಂಕಟ ನೋಡಿ ಪುನೀತ್ ಅಭಿಮಾನಿಗಳು ಕಣ್ಣೀರು ಹಾಕಿದ ಘಟನೆ ಎಂತವರ ಮನ ಕಲುಕುವಂತಿತ್ತು.
ಖ್ಯಾತ ನಟ ಪುನೀತ್ ರಾಜಕುಮಾರ್ ನಿಧನದ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಕನ್ನಡ ಸಂಘನೆಗಳಿಂದ ನಗರದ ಚನ್ನಮ್ಮ ವೃತ್ತದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.
ಶುಕ್ರವಾರ ನಗರದ ಚನ್ನಮ್ಮ ವೃತ್ತದಲ್ಲಿ ಸೇರಿದ್ದ ನೂರಾರು ಕನ್ನಡ ಸಂಘಟನೆ ಸದಸ್ಯರು ಪುನೀತ್ ಸಾವಿಗೆ ಕಂಬನಿ ಮಿಡಿದರು. ಈ ಸಂದರ್ಭದಲ್ಲಿ ಪುನಿತ್ ಪೋಟೋಗೆ ಹೂವು ಹಾಕುವ ಮೂಲಕ ಕಂಬನಿ ಮಿಡಿದರು. ಪುನೀತ್ ರಾಜಕುಮಾರ್ ಅಮರ್ ರಹೆ ಎಂಬ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಹೋರಾಟಗಾರ ಅಶೋಕ್ ಚಂದರಗಿ. ಪುನೀತ್ ಸಾವು ನಮಗೆ ಅತ್ಯಂತ ನೋವು ತರಿಸಿದೆ. ಕನ್ನಡಕ್ಕೆ ದಕ್ಕೆ ಉಂಟಾದಾಗ ಯಾವತ್ತೂ ಪುನೀತ್ ಧ್ವನಿ ಎತ್ತುತ್ತಿದ್ದರು. ಅವರ ಸಾವು ನಮಗೆ ಅತ್ಯಂತ ನೋವು ತರಿಸಿದೆ. ಬರುವ ನವೆಂಬರ್ 1 ರಂದು ನಡೆಯಬೇಕಿದ್ದ ಅದ್ದೂರಿ ರಾಜ್ಯೋತ್ಸವ ಆಚರಿಸದೆ ಸರಳ ಆಚರಣೆ ಮಾಡುವ ಮೂಲಕ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇವೆ ಎಂದರು.