ಇಲ್ಲಿಯವರೆಗೆ ಪುನೀತ್ ನನ್ನು ಕಣ್ತುಂಬಿಕೊಳ್ಳಲು ಬಂದ ಅಭಿಮಾನಿಗಳ ಸಂಖ್ಯೆ ಎಷ್ಟು ಗೊತ್ತಾ…?
ಬೆಂಗಳೂರು : ಪುನೀತ್ ರಾಜಕುಮಾರ್ ಈ ಒಂದು ಹೆಸರು ಕನ್ನಡ ನಾಡಿನ ಪ್ರತಿ ಮನೆ, ಮನಗಳಲ್ಲಿ ಪ್ರತಿಧ್ವನಿಸುತ್ತದೆ. ಛೇ ನಮ್ಮ ಅಪ್ಪುಗೆ ಈ ಸ್ಥಿತಿ ಬರಬಾರದಿತ್ತು ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಈಗಾಗಲೇ ಅಪ್ಪು ಬಾರದ ಲೋಕಕ್ಕೆ ತೆರಳಿ ಒಂದು ದಿಮ ಕಳೆದಿದೆ ಆದರೆ ಅಪ್ಪುವಿನ ಮುಖ ದರ್ಶನ ಪಡೆಯಲು ಬರುತ್ತಿರುವ ಅಭಿಮಾನಿಗಳ ಅಲೆ ಇನ್ನೂ ನಿಂತಿಲ್ಲ.
ಹೃದಯಾಘಾತದಿಂದ ನಿಧನರಾದ ಖ್ಯಾತ ನಟ ಪುನೀತ್ ಅವರ ಅಂತಿಮ ದರ್ಶನಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈವರೆಗೆ ಅಪ್ಪು ದರ್ಶನ ಪಡೆದ ಅಭಿಮಾನಿಗಳ ಸಂಖ್ಯೆ ಕೇಳಿದ್ರೆ ಆಶ್ಚರ್ಯ ಆಗುವುದಂತು ಸತ್ಯ. ಅದೆಷ್ಟೋ ಅಭಿಮಾನಿಗಳು ಶಾಂತ ರೀತಿಯಿಂದ ಅಪ್ಪುವಿನ ಮುಖ ನೋಡಲು ದೂರದ ಊರಿನಿಂದ ಬೆಂಗಳೂರಿಗೆ ಬರುತ್ತಿದ್ದಾರೆ.
ಈ ವರೆಗೆ ಅಪ್ಪು ಅವರ ಅಂತಿಮ ದರ್ಶನ ಪಡೆದಿದ್ದು ಸರಿ ಸುಮಾರು 15 ಲಕ್ಷ ಅಭಿಮಾನಿಗಳು. ಇಷ್ಟೊಂದು ದೊಡ್ಡ ಅಭಿಮಾನಿ ವರ್ಗ ಹೊಂದಿದ್ದ ಅಪ್ಪು ನಿಧನರಾಗಿದ್ದಾರೆ ಎಂದರೆ ಎಂತವರಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಲಕ್ಷಾಂತರ ಅಭಿಮಾನಿಗಳು ಸಂಯಮದಿಂದ ಅಪ್ಪು ದರ್ಶನ ಪಡೆಯುತ್ತಿದ್ದು ಕೂದಲೆಳೆಯಷ್ಷು ಅವಗಡ ಸಂಭವಿಸಿಲ್ಲ ಅಂದ್ರೆ ತಿಳಿಯುತ್ತೆ ಅಪ್ಪು ಮೇಲೆ ಅದೆಷ್ಟು ಅಭಿಮಾನ ಹೊಂದಿದ್ದಾರೆ ಅಂತಾ.
ನಾಳೆ ಅಪ್ಪು ಅಂತಿಮ ಸಂಸ್ಕಾರ : ಶುಕ್ರವಾರ ಇಹಲೋಕ ತ್ಯಜಿಸಿರುವ ಅಪ್ಪುವಿನ ಅಂತಿಮ ಸಂಸ್ಕಾರ ನಾಳೆ ಕಂಠೀರವ ಸ್ಟೂಡಿಯೋದಲ್ಲಿ ನಡೆಯಲಿದೆ. ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಸಮಾದಿ ಪಕ್ಕದಲ್ಲೇ ಅಪ್ಪು ಅಂತಿಮ ಸಂಸ್ಕಾರದ ನೆರವೇರಲಿದೆ ಎಂದು ಈಗಾಗಲೇ ಸರ್ಕಾರ ಹಾಗೂ ಕುಟುಂಬದವರು ಹೇಳಿದ್ದಾರೆ.