Select Page

Advertisement

ಬೆಳಗಾವಿ : ನಾಳೆ ಇರಲ್ಲ ಅದ್ಧೂರಿ ರಾಜ್ಯೋತ್ಸವ ; ಸರಳ ಆಚರಣೆಗೆ ಜಿಲ್ಲಾಡಳಿತ ಸಿದ್ದತೆ

ಬೆಳಗಾವಿ : ನಾಳೆ ಇರಲ್ಲ ಅದ್ಧೂರಿ ರಾಜ್ಯೋತ್ಸವ ; ಸರಳ ಆಚರಣೆಗೆ ಜಿಲ್ಲಾಡಳಿತ ಸಿದ್ದತೆ

ಬೆಳಗಾವಿ : ಕಳೆದ ಹದಿನೈದು ದಿನಗಳಿಂದ ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕೆಂಬ ಕೂಗು ನಿರಂತರವಾಗಿ ಕೇಳಿಬಂದಿತ್ತು. ಆದರೆ ಕನ್ನಡದ ಖ್ಯಾತ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನದಿಂದ ನೊಂದ ಬೆಳಗಾವಿ ಜನತೆ ಈ ಬಾರಿ ಅದ್ಧೂರಿ ರಾಜ್ಯೋತ್ಸವ ಆಚರಣೆ ಮಾಡದೆ ಸರಳ ಆಚರಣೆ ಮಾಡಲು ನಿರ್ಧರಿಸಿದ್ದಾರೆ.

ಈ ಹಿಂದೆ ನಡೆಯುತ್ತಿದ್ದ ರೂಪಕಗಳ ಮೆರವಣಿಗೆ ಇರುವುದಿಲ್ಲ. ಹಾಗೆಯೇ ತಡರಾತ್ರಿವರೆಗೆ ಡಾಲ್ಬಿ ಧ್ವನಿವರ್ಧಕ ಬಳಸಿ ಕುಣಿಯುದನ್ನು ನಿಷೇಧಿಸಲಾಗಿದೆ. ಜಿಲ್ಲಾಡಳಿತದ ವತಿಯಿಂದ ನಗರದ ಸಿಪಿಎಡ್ ಮೈದಾನದಲ್ಲಿ ಧ್ವಜಾರೋಹಣ ಸೇರಿದಂತೆ ಸರಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ಒಂದು ವರ್ಷದಿಂದ ಬೆಳಗಾವಿ ಕನ್ನಡ ರಾಜ್ಯೋತ್ಸವ ಸರಳವಾಗಿ ನಡೆಯುತ್ತಿದ್ದು ಈ ಬಾರಿಯೂ ಜನ ಸಹಕಾರ ನೀಡಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

ಇಲ್ಲಿಯವರೆಗೆ ಪುನೀತ್ ನನ್ನು ಕಣ್ತುಂಬಿಕೊಳ್ಳಲು ಬಂದ ಅಭಿಮಾನಿಗಳ ಸಂಖ್ಯೆ ಎಷ್ಟು ಗೊತ್ತಾ…? https://belagavivoice.com/actor_punit_rajkumar_last_moment/#.YX1qZVuuAHE.whatsapp

ಕಳೆದ ವರ್ಷ ಕೊರೊನಾ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಸರಳ ರಾಜ್ಯೋತ್ಸವ ಆಚರಣೆ ಮಾಡಲಾಗಿತ್ತು. ಆದರೆ ಈ ಬಾರಿ ಅದ್ಧೂರಿ ರಾಜ್ಯೋತ್ಸವ ಆಚರಣೆಗೆ ಕನ್ನಡಿಗರು ಸರ್ಕಾರಕ್ಕೆ ಪಟ್ಟು ಹಿಡಿದಿದ್ದರು. ಇವೆಲ್ಲದರ ತರುವಾಯು ಯಾರು ಊಹೆ ಮಾಡದಂತ ಸುದ್ದಿಯಿಂದ ನೊಂದ ಗಡಿನಾಡ ಕನ್ನಡಿಗರು ಸರಳ ರಾಜ್ಯೋತ್ಸವ ಆಚರಣೆಗೆ ಕರೆ ಕೊಟ್ಟಿದ್ದಾರೆ. ಅಪ್ಪು ಸಾವಿನಿಂದ ಇಡೀ ಕರ್ನಾಟಕ ಶೋಕ ಸಾಗರದಲ್ಲಿ ಮುಳುಗಿದ್ದು ಈ ಬಾರಿ ಸಡಗರದ ರಾಜ್ಯೋತ್ಸವ ಆಚರಣೆ ನಡೆಸಿದಂತೆ ನಿರ್ಧರಿಸಲಾಗಿದೆ.

Advertisement

Leave a reply

Your email address will not be published. Required fields are marked *