
VIDEO : ಬೆಳಗಾವಿಯಲ್ಲಿ ಅಪ್ಪು ಪಾಲ್ಗೊಂಡಿದ್ದ ಕೊನೆಯ ಕಾರ್ಯಕ್ರಮ : ಪುನೀತ್ ಹಾಡಿದ್ದ ಆ ಹಾಡು ಇನ್ನೂ ನೆನಪು ಮಾತ್ರ

ಬೆಳಗಾವಿ : ಖ್ಯಾತ ಕಲಾವಿದ ಪುನೀತ್ ರಾಜಕುಮಾರ್ ಇನ್ನೂ ಕೇವಲ ನೆನಪು ಮಾತ್ರ. ಆದರೆ ಅವರು ಬಿಟ್ಟು ಹೋದ ಕೆಲವು ಸುಮಧುರ ಗುಳಿಗೆಗಳು ಯಾವತ್ತೂ ಕನ್ನಡಿಗರನ್ನು ಕಾಡುತ್ತಿರುತ್ತವೇ. ಅಪ್ಪು ಕೊನೆಯದಾಗಿ ಬೆಳಗಾವಿಗೆ ಭೇಟಿ ನೀಡಿದ್ದು ಅವರ ಯುವರತ್ನ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ.
ಹೌದು ಅಂದು ನಗರದ ಚಿತ್ರಮಂದಿರಕ್ಕೆ ಆಗಮಿಸಿದ್ದ ಪುನೀತ್ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಕಾತರದಿಂದ ಕಾಯ್ದಿದ್ದರು. ಅಭಿಮಾನಗಳತ್ತ ಕೈ ಬೀಸುತ್ತಾ ವೇದಿಕೆ ಹತ್ತಿದ್ದ ಅಪ್ಪು ಬೆಳಗಾವಿ ಜನ ಪ್ರೀತಿಗೆ ಖುಷಿಪಟ್ಟು ಹಾಡು ಹಾಡಿದರು. ಜೊತೆಗೆ ಬೆಳಗಾವಿಯನ್ನು ಹೊಗಳಿದ್ದು ಇನ್ಮುಂದೆ ನೆನಪು ಮಾತ್ರ.
ಈ ಹಿಂದೆಯೂ ಅನೇಕ ಚಲನಚಿತ್ರಗಳ ಶೂಟಿಂಗ್ ಸಂದರ್ಭದಲ್ಲಿ ಅಪ್ಪು ಬೆಳಗಾವಿಗೆ ಬಂದಿದ್ದರು. ಅಷ್ಟೇ ಅಲ್ಲದೆ ಬೆಳಗಾವಿ ಮಣ್ಣಿಗೂ ಅಪ್ಪುಗು ಅವಿನಾಭಾವ ಸಂಬಂಧವಿತ್ತು. ದೊಡ್ಡ ಪ್ರಮಾಣದ ಅಭಿಮಾನಿ ಬಳಗವನ್ನು ಹೊಂದಿದ್ದ ಅಪ್ಪು ಎಲ್ಲರನ್ನೂ ಅನಾಥರನ್ನಾಗಿ ಮಾಡಿ ಹೊರಟು ಹೋಗಿದ್ದು ನೋವಿನ ಸಂಗತಿ.