Savadi – ಸಾಹುಕಾರ್ ತಂತ್ರಕ್ಕೆ ಕಮಲ ಕಿಲಕಿಲ
ಬೆಳಗಾವಿ : ರಾಜ್ಯ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದ ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆ ಫಲಿತಾಂಶ ಹೊರಬಿದಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಲಾ ಒಂದು ಕ್ಷೇತ್ರ ತನ್ನದಾಗಿಸಿಕೊಂಡಿವೆ. ಆದರೆ ಸಿಂದಗಿ ಉಪ ಚುನಾವಣೆಯಲ್ಲಿ ಅಥಣಿ ಸಾಹುಕಾರ್ ಮೇನಿಯಾ ಕೆಲಸ ಮಾಡಿದ್ದು, ಸವದಿ ಉಪ ಚುನಾವಣೆ ಚಾಣಕ್ಯ ಪಟ್ಟ ಕಾಯ್ದುಕೊಂಡಿದ್ದಾರೆ.
ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆ ಬಿಜೆಪಿಗೆ ಒಂದು ರೀತಿಯಲ್ಲಿ ಅಗ್ನಿಪರೀಕ್ಷೆಯಾಗಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿಯ ಬಲಿಷ್ಠ ಅಭ್ಯರ್ಥಿಗಳು ಕಣದಲ್ಲಿದ್ದರು. ಹೇಗಾದರೂ ಮಾಡಿ ಗೆಲುವು ಸಾಧಿಸಲು ಪಣ ತೊಟ್ಟ ಬಿಜೆಪಿಗೆ ಕೊನೆಗೂ ಒಂದು ಕ್ಷೇತ್ರ ಸಿಕ್ಕಿದೆ. ಆದರೆ ಈ ಗೆಲುವಿನ ಹಿಂದೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ತಂತ್ರ ಕೆಲಸ ಮಾಡಿದ್ದು ಸುಳ್ಳಲ್ಲ.
ಸಿಂದಗಿ ಫಲಿತಾಂಶ :
ಬಿಜೆಪಿ : ರಮೇಶ ಭೂಸನೂರ – 93380 ಮತ
ಕಾಂಗ್ರೆಸ್ : ಅಶೋಕ ಮನಗೂಳಿ 62292 ಮತ ಜೆಡಿಎಸ್ : ನಾಜಿಯಾ ಅಂಗಡಿಗೆ – 4321 ಮತ.
ಬಿಜೆಪಿ ಗೆಲುವಿನ ಅಂತರ – 31088
ಉಪ ಚುನಾವಣೆ ಘೋಷಣೆಯಾದ ನಂತರ ಸಿಂದಗಿ ಕ್ಷೇತ್ರದ ಉಸ್ತುವಾರಿ ತಂಡದಲ್ಲಿ ಲಕ್ಷ್ಮಣ ಸವದಿ ಅವರಿಗೆ ಮಹತ್ವದ ಹೊಣೆ ನೀಡಿದ್ದ ಬಿಜೆಪಿ ಹೈಕಮಾಂಡ್ ಅವರ ಚಾಣಾಕ್ಷ ರಾಜಕೀಯ ತಂತ್ರಗಾರಿಕೆಯನ್ನು ಉಪಯುಕ್ತವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರಬಲ ಗಾಣಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟ ಸವದಿ ಎಲ್ಲಾ ಮತಗಳನ್ನು ಬಿಜೆಪಿಯತ್ತ ಸೇರಿಸುವಲ್ಲಿ ಆಶಸ್ವಿಯಾದರು.
ಸಿಂದಗಿ ಕ್ಷೇತ್ರದ ಜಾತಿವಾರು ಬಲಾಬಲ ನೋಡುವುದಾದರೆ. ಕ್ಷೇತ್ರದಲ್ಲಿ ಒಟ್ಟು 2,34,309 ಮತದಾರರಿದ್ದು ಇಲ್ಲಿ ಜಾತಿ ಲೆಕ್ಕಾಚಾರ ಸೋಲು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಅಂದಾಜಿನ ಪ್ರಕಾರ ಸಿಂದಗಿ ಕ್ಷೇತ್ರದಲ್ಲಿ ಜಾತಿವಾರು ಮತದಾರರ ಅಂಕಿ ಅಂಶಗಳನ್ನು ನಾವು ಲೆಕ್ಕ ಹಾಕಿದಾಗ ಪಂಚಮಸಾಲಿ 22000, ಬಣಜಿಗ 115000, ಆಧಿ ಬಣಜಿಗ 4000, ಹಾಲು ಮತ ಕುರುಬ ಸಮಾಜ 37000, ಗಾಣಿಗ 31000- ಮುಸ್ಲಿಂ 38000, ರೆಡ್ಡಿ 3500, ಕೋಳಿ ಕಬ್ಬಲಿಗಾ 21000, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ 55000, ಜಂಗಮ 6500- ಕುಡ ಒಕ್ಕಲಿಗ 3500 ಮತದಾರಿದ್ದರು.
ಒಟ್ಟಿನಲ್ಲಿ ಅಥಣಿ ಸಾಹುಕಾರ್ ಮತ್ತೊಮ್ಮೆ ತಮ್ಮ ರಾಜಕೀಯ ಚಾಣಾಕ್ಷತೆ ಮೆರೆದಿದ್ದು. ಬಿಜೆಪಿ ಗೆಲುವಿಗೆ ಪ್ರಮುಖ ಪಾತ್ರ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.